ಹೃದಯಾಘಾತ ಆಗುತ್ತಿದ್ದಂತೆ ಏನು ಮಾಡಬೇಕು ಎನ್ನುವುದು ಸಾಮಾನ್ಯರಿಗೆ ಗೊತ್ತಿರುವುದಿಲ್ಲ. ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲೇ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು.
ಇದನ್ನು ತಪ್ಪಿಸಲು ಹೀಗೆ ಮಾಡಿ. ಹೃದಯಾಘಾತವಾದ ವ್ಯಕ್ತಿಯ ಬಟ್ಟೆಯನ್ನು ಸಡಿಲಿಸಿ ಸರಿಯಾದ ಜಾಗದಲ್ಲಿ ಮಲಗಿಸಬೇಕು. ತಲೆ ಸ್ವಲ್ಪ ಕೆಳಗೆ, ಕಾಲು ಸ್ವಲ್ಪ ಮೇಲಕ್ಕೆ ಇರಲಿ. ಇದರಿಂದ ಹೃದಯಕ್ಕೆ ರಕ್ತಪೂರೈಕೆ ಸರಾಗವಾಗುತ್ತದೆ.
ರೋಗಿಗೆ ವಾಂತಿ ಬಂದರೆ ಮುಖವನ್ನು ನೋವಾಗದಂತೆ ಒಂದು ಕಡೆ ವಾಲಿಸಿ.
ನಾಡಿಬಡಿತ ಹಾಗೂ ಉಸಿರಾಟದ ಪರೀಕ್ಷೆ ಮಾಡಿ.
ನಾಡಿಬಡಿತ ನಿಂತಿದ್ದರೆ ಆಸ್ಪತ್ರೆ ತಲುಪುವವರೆಗೂ ಸಿಪಿಆರ್ ಮಾಡಿ. ಅಂದರೆ ರೋಗಿಯ ಎದೆ ಮೇಲೆ ನಿಮ್ಮ ಹಸ್ತವನ್ನು ಇಟ್ಟು ಕೆಳಮುಖವಾಗಿ ಒತ್ತಿ.
ಇದನ್ನು ಪ್ರತಿ ನಿಮಿಷಕ್ಕೆ 12 ಬಾರಿ ಪುನರಾವರ್ತನೆ ಮಾಡಿ. ಉಸಿರಾಡಲು ತೊಂದರೆ ಆಗುತ್ತಿದ್ದರೆ ಮೂಗನ್ನು ಮುಚ್ಚಿ ಬಾಯಿಯಿಂದ ಉಸಿರಾಟವನ್ನು ನೀಡಿ.
ಇದರಿಂದ ಗಾಳಿ ನೇರವಾಗಿ ಶ್ವಾಸಕೋಶವನ್ನು ತಲುಪಲು ನೆರವಾಗುತ್ತದೆ.