ಪರೋಟದ ಮೇಲೆ ಜಿಎಸ್‌ಟಿ ದರವನ್ನು ಶೇ.18ಕ್ಕೆ ಏರಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.
ಹೌದು, ರೋಟಿ ಹಾಗೂ ಪರೋಟ ನಡುವೆ ವ್ಯತ್ಯಾಸ ಕಂಡುಹಿಡಿದಿರುವ ಎಎಆರ್, ಪರೋಟ ಮೇಲೆ 18ರಷ್ಟು ಹಾಗೂ ರೋಟಿ ಮೇಲೆ 5% ರಷ್ಟು ಜಿಎಸ್‌ಟಿ ವಿಧಿಸಿದೆ.
ಇದಕ್ಕೆ ಕಾರಣವನ್ನು ನೀಡಿರುವ ಸಂಸ್ಥೆ, ಪರೋಟ ರೆಡಿ ಟು ಈಟ್ ರೀತಿ ಇರುತ್ತದೆ. ಆದರೆ ರೋಟಿಗೆ ಎಲ್ಲವನ್ನು ಸಿದ್ಧಪಡಿಸಿಕೊಳ್ಳಬೇಕು. ಆದ್ದರಿಂದ ಪರೋಟಕ್ಕೆ ಜಿಎಸ್‌ಟಿ ದರ ಹೆಚ್ಚಾಗಿದೆ ಎನ್ನಲಾಗಿದೆ.
ಆದರೆ ಇದಕ್ಕೆ ನೆಟ್ಟಿಗರು ಭಾರಿ ಟ್ರೋಲ್ ಮಾಡಿದ್ದು, ರೋಟಿ, ಪರೋಟ ಎರಡು ಒಂದೇ. ಆದರೂ ಈ ತಾರತಮ್ಯವೇಕೆ ಎಂದು ಪ್ರಶ್ನಿಸಿದರೆ, ಇನ್ನು ಕೆಲವರು ಪರೋಟ ಮುಂದೆ ಪೂರಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಲೆಳೆದಿದ್ದಾರೆ. ಒಟ್ಟಾರೆ ಪರೋಟ ಮೇಲೆ ಜಿಎಸ್‌ಟಿ ವಿಧಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.