ತುಮಕೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್ ಜಾರಿ ಮಾಡಲಾಗಿದ್ದು ಇದರ ಪರಿಣಾಮ ಕುರಿ, ಮೇಕೆ ಮಾರುಕಟ್ಟೆಗಳು ಆರಂಭವಾಗಿಲ್ಲ.
ಕುರಿ-ಮೇಕೆ ವ್ಯಾಪಾರ ಮಾರುಕಟ್ಟೆಯಲ್ಲಿ ನಡೆಯುತ್ತಿಲ್ಲ. ಸಾಕಾಣಿಕೆದಾರರು, ಮಾರಾಟಗಾರರು ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದಾಗಿ ಕುರಿ ಮತ್ತು ಮೇಕೆ ಮಾಂಸದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ತುಮಕೂರಿನ ಊರ್ಡಿಗೆರೆಯಲ್ಲಿ ಕುರಿ ಮತ್ತು ಮೇಕೆ ಮಾಂಸದ ಬೆಲೆಯಲ್ಲಿ ಭಾರಿ ಏರಿಕೆ ಆಗಿದೆ. ಊರ್ಡಿಗೆರೆಯಲ್ಲಿ ಕಳೆದ ತಿಂಗಳು 500 ರಿಂದ 550 ರೂ.ವರೆಗೂ ಇದ್ದ ಮಾಂಸದ ಬೆಲೆ ಈಗ 700 ರಿಂದ 800 ರೂಪಾಯಿವರೆಗೂ ತಲುಪಿದೆ. ಮಾರುಕಟ್ಟೆಗೆ ಕುರಿ ಮತ್ತು ಮೇಕೆಗಳು ಮಾರಾಟಕ್ಕೆ ಬರುತ್ತಿಲ್ಲ. ಮಾಂಸದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.