ಕಲ್ಲು ಸಕ್ಕರೆಯನ್ನು ಮದ್ದಿಗೆ, ಮಕ್ಕಳಿಗೆ ಬಳಸುವುದನ್ನು ತಿಳಿದಿದ್ದೇವೆ. ಅದರ ಲಾಭಗಳನ್ನು ನೋಡೋಣ. ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆ ಬೇರೆ ಮತ್ತು ಕಲ್ಲು ಸಕ್ಕರೆ ಬೇರೆ ಬೇರೆಯವು. ಆಯುರ್ವೇದಿಕ್ ಔಷಧಿಗಳ ತಯಾರಿಕೆಯಲ್ಲಿ ಕಲ್ಲು ಸಕ್ಕರೆಯನ್ನು ಬಳಸುತ್ತಾರೆ ಹೊರತು ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆಯನ್ನು ಬಳಸುವುದಿಲ್ಲ.
ಅಂಗಡಿಯಲ್ಲಿ ಸಿಗುವ ಸಕ್ಕರೆಯಲ್ಲಿ ಕೆಮಿಕಲ್ ಬಳಸಿರುತ್ತಾರೆ. ಅದನ್ನು ರಿಫೈನ್ ಮಾಡಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸದಿಂದ ಬೆಲ್ಲ, ಸಕ್ಕರೆ, ಕಲ್ಲು ಸಕ್ಕರೆಯನ್ನು ತಯಾರಿಸುತ್ತಾರೆ. ಇದರಲ್ಲಿ ಕಲ್ಲು ಸಕ್ಕರೆ ಮತ್ತು ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು.
ಸಕ್ಕರೆ ಬೆಳ್ಳಗೆ ಕಾಣಲು ಪಾಲಿಷಿಂಗ್ ಮಾಡುತ್ತಾರೆ. ಈ ವಿಧಾನವನ್ನು ರಿಫೈನ್ ಪ್ರೋಸೆಸ್ ಎಂದು ಕರೆಯುತ್ತಾರೆ. ಪದೇ ಪದೇ ರಿಫೈನ್ ಮಾಡಿರುವ ಬಿಳಿ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಕಲ್ಲು ಸಕ್ಕರೆ ರಿಫೈನ್ ಮಾಡದ ಆಹಾರ. ಆಯುರ್ವೇದದ ಪ್ರಕಾರ ಕಲ್ಲು ಸಕ್ಕರೆ ತಂಪು ಆಹಾರ. ಪಿತ್ತ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು.