ಕಳೆದ ಕೆಲ ವಾರಗಳಿಂದ ವಾನರಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.
ಕಳೆದ ವಾರ ಕರ್ನಾಟಕದ ದಾಂಡೇಲಿಯಲ್ಲಿ ಲಂಗೂರ್ ಮಂಗವೊಂದು ಗಾಯಗೊಂಡ ಬಳಿಕ ಅಲ್ಲಿನ ಪಾಟೀಲ್ ಆಸ್ಪತ್ರೆ ಬಳಿ ಹೋಗಿ ನಿಂತಿದ್ದನ್ನು ಕಂಡ ವೈದ್ಯರು ಅದಕ್ಕೆ ಆರೈಕೆ ಮಾಡಿದ ವಿಡಿಯೋವೊಂದನ್ನು ಐಎಫ್ಎಸ್ ಅಧಿಕಾರಿ ಸಂದೀಪ್ ತ್ರಿಪಾಠಿ ಶೇರ್ ಮಾಡಿಕೊಂಡಿದ್ದರು.
ಚಿಂಪಾಂಜಿಯೊಂದು ಮೀನುಗಳಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದ ಹಂಚಿಕೊಂಡಿದ್ದಾರೆ.
“ಚಿಂಪಾಂಜಿಗಳು ಶೇ.98 ಮಾನವರು. ಮೀನುಗಳಿಗೆ ಆಹಾರ ನೀಡುವುದು ಒತ್ತಡ ನಿವಾರಣೆ ಮಾಡಿಕೊಳ್ಳಲು ಇರುವ ಒಳ್ಳೆಯ ಮಾರ್ಗಗಳಲ್ಲಿ ಒಂದು. ನೀವೂ ಒಮ್ಮೆ ಪ್ರಯತ್ನಿಸಿ ನೋಡಿ” ಎಂದು ನಂದಾ ಕ್ಯಾಪ್ಷನ್ ಹಾಕಿದ್ದಾರೆ.