
ಅತ್ಯುತ್ತಮ ಗುಣಮಟ್ಟದ ಫ್ರೆಂಚ್ ಹಂದಿಗಳನ್ನು ಚೀನಾಗೆ ಈ ವರ್ಷ ಆರು ವಿಮಾನಗಳಲ್ಲಿ ಸಾಗಾಟ ಮಾಡಲಾಗಿದೆ. 2018ರಲ್ಲಿ ಆಫ್ರಿಕನ್ ಹಂದಿ ಜ್ವರ ದೇಶಾದ್ಯಂತ ಹಬ್ಬಿದ್ದ ಬಳಿಕ ಇದೀಗ ಹಂದಿಗಳ ಆಮದನ್ನು ಮತ್ತೆ ಆರಂಭಿಸಲು ಚೀನಾ ಮುಂದಾಗಿದೆ.
ಚೀನಾದಲ್ಲಿ ಹಂದಿ ಮಾಂಸಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇರುವ ಕಾರಣ ಅಲ್ಲಿನ ಸರ್ಕಾರ ಇದೀಗ ಪೂರೈಕೆ ಮಾಡಲು ಮುಂದೆ ಬಂದಿದೆ. ಈ ಹಿಂದೆ ಇದ್ದ ಕಾಂಟ್ರಾಕ್ಟ್ ಗಳ ಸಂಖ್ಯೆಯನ್ನು ರೈತರು ದುಪ್ಪಟ್ಟುಗೊಳಿಸುತ್ತಿದ್ದಾರೆ.
ಪ್ರತಿ ವರ್ಷವೂ ಸುಮಾರು 70 ಕೋಟಿ ಹಂದಿಗಳನ್ನು ಕೊಲ್ಲುವ ಮೂಲಕ 5 ಕೋಟಿ ಟನ್ ಗಳಷ್ಟು ಪೋರ್ಕ್ (ಹಂದಿ ಮಾಂಸ) ಉತ್ಪಾದನೆ ಮಾಡುತ್ತಿದೆ ಚೀನಾ. ಆದರೆ ಸೋಂಕಿನ ಕಾರಣದಿಂದ 2019ರಲ್ಲಿ ಹಂದಿ ಮಾಂಸದ ಬೇಡಿಕೆಯಲ್ಲಿ ಶೇ.21 ರಷ್ಟು ಇಳಿಕೆ ಕಂಡುಬಂದಿತ್ತು.