alex Certify ಬೆರಗಾಗಿಸುತ್ತೆ ಮಗಳ ಸಾಧನೆಗೆ ಈ ತಾಯಿ ನೀಡಿದ ಪ್ರತಿಕ್ರಿಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಮಗಳ ಸಾಧನೆಗೆ ಈ ತಾಯಿ ನೀಡಿದ ಪ್ರತಿಕ್ರಿಯೆ..!

ಕಣ್ಣೆದುರು ಬೆಳೆದ ಮಕ್ಕಳು ಎತ್ತರೆತ್ತರದ ಸ್ಥಾನಕ್ಕೆ ಏರಿದಷ್ಟೂ ಹೆತ್ತವರಿಗೆ ಸಂತಸವೇ ಅಲ್ಲವೇ ?

ತನ್ನ ಮಗಳು ಅಮೆರಿಕದ ಪ್ರತಿಷ್ಠಿತ ಕಾನೂನು ಶಾಲೆಯೊಂದರ ವಿದ್ಯಾರ್ಥಿ ವೇತನ ಪಡೆಯಲು ಅರ್ಹಳಾಗಿದ್ದಾಳೆ ಎಂಬುದು ಗೊತ್ತಾದದ್ದೇ ತಡ ಆ ತಾಯಿ ಕುಣಿದು ಸಂಭ್ರಮಿಸಿದ್ದು ಅಷ್ಟಿಷ್ಟಲ್ಲ.

ತಾಯಿಯ ಸಂಭ್ರಮ, ಅಚ್ಚರಿಗಳನ್ನ ವಿಡಿಯೋ ಮಾಡಿರುವ ಮಗಳು ಟ್ವಿಟ್ಟರ್ ಅಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಸುಮಾರು 40 ಸಾವಿರ ಡಾಲರ್ ಸ್ಕಾಲರ್ ಶಿಪ್ ಗೆ ಆಯ್ಕೆಯಾದ ಬಗ್ಗೆ ಕಾನೂನು ಶಾಲೆ ಕಳುಹಿಸಿಕೊಟ್ಟ ಪತ್ರವನ್ನ ತಾಯಿಗೆ ಕೈಗೆ ಕೊಡುತ್ತಾಳೆ. ಆರಂಭದಲ್ಲಿ ನೋಡಿ ನಂಬದ ತಾಯಿ, ನಂತರದಲ್ಲಿ ಬೆರಗಿನಿಂದಲೇ ಮಗಳ ಸಾಧನೆಯನ್ನು ಸಂಭ್ರಮಿಸುವ ವಿಡಿಯೋ ನೋಡಿದ ಜನರು, ಇದಲ್ಲವೇ ತಾಯಿ ಪ್ರೀತಿ ಎಂದರೆ…..ಇದಲ್ಲವೇ ಸಾಧನೆ ಎಂದರೆ……ಎನ್ನುತ್ತಾ ಅಮ್ಮ-ಮಗಳಿಬ್ಬರನ್ನೂ ಕೊಂಡಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...