alex Certify ವಾಟ್ಸಾಪ್ ಚಾಟ್‌ ನಲ್ಲಿ ಚಿರು ಏನೇಳಿದ್ದಾರೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಚಾಟ್‌ ನಲ್ಲಿ ಚಿರು ಏನೇಳಿದ್ದಾರೆ ಗೊತ್ತಾ…?

ಚಿರು ಬಾರದ ಲೋಕಕ್ಕೆ ಹೋಗಿದ್ದಾರೆ ಎನ್ನುವುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಜೀವನದ ಕಥೆ ಮುಗಿಸಿದ್ದಾರೆ ಚಿರಂಜೀವಿ ಸರ್ಜಾ. ನಟ ಚಿರು ಅವರು ನಟಿ ಮೇಘನಾ ರಾಜ್ ಅವರನ್ನು ಸುಮಾರು ಪ್ರೀತಿಸಿ 2 ವರ್ಷದ ಹಿಂದೆ ಎಂದರೆ 2018 ಮೇ 3ರಂದು ವಿವಾಹವಾಗಿದ್ದರು. ಸದ್ಯ ಮೇಘನಾ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಚಿರು ಇಲ್ಲದ ಜೀವನವನ್ನು ಈ ನಟಿ ಹೇಗೆ ನಿಭಾಯಿಸುತ್ತಾರೋ ಆ ದೇವರಿಗೆ ಗೊತ್ತು.

ಇನ್ನು ಚಿರುವನ್ನು ಹತ್ತಿರದಿಂದ ನೋಡಿದ ಅನೇಕ ಮಂದಿ ಅವರ ಸ್ನೇಹಿತರು ಚಿರು ಇನ್ನಿಲ್ಲ ಎಂಬುದನ್ನು ಇಲ್ಲಿಯವರೆಗೂ ನಂಬದ ಸ್ಥಿತಿಯಲ್ಲಿದ್ದಾರೆ. ಇದರ ನಡುವೆಯೇ ಚಿರು ತನ್ನ ಸ್ನೇಹಿತರ ಜೊತೆಗೆ ಮಾಡಿದ್ದ ಕೊನೆಯ ವಾಟ್ಸಾಪ್ ಮೆಸೇಜ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಮೆಸೇಜ್ ಓದಿದರೆ ಕಣ್ಣಲ್ಲಿ ನೀರು ಬರುವಂತಿದೆ.

ಲಾಕ್ ‌ಡೌನ್ ಸಮಯದಲ್ಲಿ ಕುಟುಂಬಸ್ಥರ ಜೊತೆ ಹೆಚ್ಚು ಕಾಲ ಕಳೆದಿದ್ದ ಈ ನಟ ಸ್ನೇಹಿತರನ್ನು ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿ ಮೆಸೇಜ್ ಮಾಡಿರುವ ಚಿರು ಹಾಯ್ ಸ್ನೇಹಿತರೇ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾವೆಲ್ಲ ಒಂದು ವಾರ ಟ್ರಿಪ್ ಹೋಗೋಣ, ಕಳೆದುಹೋದ ಸಮಯವನ್ನು ಮತ್ತೆ ಪಡೆಯೋಣ. ನಿಮ್ಮ ಜೊತೆಯಲ್ಲಿರುವುದಕ್ಕಿಂತ ಅಮೂಲ್ಯವಾದದ್ದು ಇನ್ನೇನಿಲ್ಲ ಎಂದೆಲ್ಲಾ ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...