ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕ ವಂಚಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಆಡುಗೋಡಿಯ ಬಾಲಪ್ಪ ಲೇಔಟ್ ನಿವಾಸಿಯಾಗಿರುವ 32 ವರ್ಷದ ಯುವತಿ ದೂರು ನೀಡಿದ್ದು ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2018 ರಲ್ಲಿ ಪಾಂಡಿಚೇರಿಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ಬೆಂಗಳೂರಿನ ಅಕ್ಷಯ್ ಕುಮಾರ್ ಪರಿಚಯವಾಗಿದ್ದ.
ಬಳಿಕ ಇಬ್ಬರ ನಡುವೆ ಗೆಳೆತನವಾಗಿ ಪ್ರೀತಿಸಿದ್ದು ಮದುವೆಯಾಗುವುದಾಗಿ ನಂಬಿಸಿದ ಆರೋಪಿ ದೈಹಿಕ ಸಂಪರ್ಕ ಬೆಳೆಸಿದ್ದ. ಆತನಿಗೆ ಬ್ಯಾಂಕಿನಲ್ಲಿ ಸಾಲ ಪಡೆದು ಕಾರು ಕೊಡಿಸಿದ್ದ ಯುವತಿ ದುಬಾರಿ ಬೆಲೆಯ ಮೊಬೈಲ್ ಮತ್ತು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದ್ದರು. ಎಲ್ಲವನ್ನು ಪಡೆದುಕೊಂಡ ಯುವಕ ವಂಚಿಸಿದ್ದಾನೆ ಎಂದು ಹೇಳಲಾಗಿದೆ.