ಉನ್ನತ ಹುದ್ದೆ ಸಿಕ್ಕರೆ ಯಾರಾದರೂ ಬೇಡ ಅನ್ನೋರನ್ನ ಎಲ್ಲಾದ್ರೂ ನೋಡಿದ್ದೀರಾ..? ಆದರೆ ಇಲ್ಲೊಬ್ಬ ಪೇದೆ ತಮಗೆ ಸಿಕ್ಕಿದ್ದ ಎಸ್.ಐ. ಹುದ್ದೆ ಬೇಡ ಎಂದು ನಿರಾಕರಿಸಿದ್ದಾರೆ. ಇದಕ್ಕೆ ಕಾರಣ ಕೌಟುಂಬಿಕ ಸಮಸ್ಯೆ ಎಂದು ಹೇಳಲಾಗುತ್ತಿದೆ.
ಹೌದು, ಎಸ್ಜೆ ಪಾರ್ಕ್ ಪೊಲೀಸ್ ಠಾಣೆಯ ಎಸ್ಐ ರಮೇಶ್ ತಮಗೆ ಈ ಹುದ್ದೆ ಬೇಡ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಗೆ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಭಾಸ್ಕರ್ ರಾವ್ ಅನುಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈಸೂರಿನಲ್ಲಿ ಹೆಡ್ ಕಾನ್ಪ್ಟೇಬಲ್ ಆಗಿದ್ದ ರಮೇಶ್ ಬಳಿಕ ಎಸ್ಜೆ ಪಾರ್ಕ್ನಲ್ಲಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕುಟುಂಬದಲ್ಲಿ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಇದೀಗ ಎಸ್ಐನಿಂದ ಬಿಡುಗಡೆಗೊಂಡು ಮೈಸೂರು ನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಮರಳಿದ್ದಾರೆ ಎನ್ನಲಾಗಿದೆ.