ಸಂಗಾತಿಯನ್ನು ತನ್ನತ್ತ ಸೆಳೆಯಲು ನವಿಲುಗಳು ಏನೆಲ್ಲ ಕಸರತ್ತು ಮಾಡುತ್ತವೆ? ತಮ್ಮ ಗರಿ ಬಿಚ್ಚಿ ಕುಣಿಯುವುದನ್ನು ನೋಡಿರುತ್ತೇವೆ. ಆದರೆ ಬಿಳಿ ನವಿಲು ಈ ರೀತಿ ಮಾಡುವುದನ್ನು ನೋಡಿದ್ದೀರಾ…? ಇಲ್ಲಿದೆ ನೋಡಿ ವಿಡಿಯೊ
ಹೌದು, ಮಿಲನಕ್ಕಾಗಿ ಸಂಗಾತಿಯನ್ನು ಸೆಳೆಯಲು ಹೈದರಾಬಾದ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬಿಳಿ ನವಿಲೊಂದು ಎಷ್ಟು ಕಸರತ್ತು ಮಾಡಿದೆ ಎನ್ನುವ ವಿಡಿಯೊ ಇದೀಗ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಹಲವು ಸಮಯ ತನ್ನ ಸಂಗಾತಿಯ ಹಿಂದೆ ಮುಂದೆ ಓಡಾಡಿಕೊಂಡು ರೆಕ್ಕೆ ಬಿಚ್ಚಿ ಆಕೆಯನ್ನು ಸೆಳೆಯಲು ಬಿಳಿ ನವಿಲು ಪ್ರಯತ್ನಿಸಿದೆ. ಈ ವಿಡಿಯೊಗೆ ನೆಟ್ಟಿಗರೊಬ್ಬರು, ನವಿಲಿನ ಸಂಗಾತಿ ಎಂಪ್ರೆಸ್ ಆದಳೋ ಇಲ್ಲವೋ ಗೊತ್ತಿಲ್ಲ ನಾನಂತೂ ಫಿದಾ ಆದೆ ಎಂದಿದ್ದಾರೆ. ಈ ವಿಡಿಯೊ ಇದೀಗ ಐನೂರು ರಿಟ್ವೀಟ್ ಹಾಗೂ 5 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ.