ಕೊರೊನಾ ಲಾಕ್ಡೌನ್ ನಿಂದಾಗಿ ದೇಶದ ಆರ್ಥಿಕತೆಯೇ ಅಲ್ಲೋಲಕಲ್ಲೋಲವಾಗಿದೆ. ಈಗ ಲಾಕ್ಡೌನ್ ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಿರುವ ಕಾರಣ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಆದರೆ ಕೆಲವೊಂದು ಉದ್ಯಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಮುಚ್ಚುವ ಹಂತ ತಲುಪಿವೆ.
ಹೀಗಾಗಿ ಇವುಗಳ ಪುನಃಶ್ಚೇತನಕ್ಕೆ ಹಾಗೂ ಉದ್ಯಮ ವಿಸ್ತರಣೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಬಹಳಷ್ಟು ಯೋಜನೆಗಳನ್ನು ಘೋಷಿಸಿದ್ದು, ಬ್ಯಾಂಕುಗಳು ಸಹ ಇದಕ್ಕಾಗಿ ಸಾಲ ನೀಡಲು ಸಿದ್ಧವಾಗಿವೆ. ಆದರೆ ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಾರದಿರುವ ಕಾರಣ ಮುಂದೆ ಹೇಗೋ ಏನೋ ಎಂಬ ಕಾರಣಕ್ಕೆ ಉದ್ಯಮಿಗಳು ಸಾಲ ಪಡೆಯಲು ಮುಂದಾಗುತ್ತಿಲ್ಲ ಎಂದು ಹೇಳಲಾಗಿದೆ.
ಬ್ಯಾಂಕುಗಳು ಸಾಲ ನೀಡಲು ಸಿದ್ಧವಿದ್ದರೂ ಸಹ ಸಾಲ ನೀಡುವ ಮುನ್ನ ಬಹಳಷ್ಟು ಮುಂಜಾಗರೂಕ ಕ್ರಮಗಳನ್ನು ಅನುಸರಿಸಬೇಕಿದೆ. ಹೀಗಾಗಿ ಸಾಲ ಪಡೆಯುವವರು ಅರ್ಜಿ ಸಲ್ಲಿಸಿದ ವೇಳೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯಲು ಬಹಳಷ್ಟು ಮಂದಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.