ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜನಪ್ರಿಯತೆ ದಿನೇ ದಿನೇ ಕುಸಿತವಾಗುತ್ತಿದೆ. ಇದೇ ವೇಳೆ ಆಡಳಿತದಲ್ಲಿ ಸೇನೆಯ ಬಿಗಿಹಿಡಿತ ಜಾಸ್ತಿಯಾಗತೊಡಗಿದೆ.
ಪಾಕ್ ಸೇನೆಯ ಹಾಲಿ ಮತ್ತು ಮಾಜಿ ಅಧಿಕಾರಿಗಳು ಸರ್ಕಾರದ ಆಯಕಟ್ಟಿನ ಹುದ್ದೆಗಳಿಗೆ ನಿಯೋಜನೆಗೊಂಡಿದ್ದಾರೆ.
ಸಂಸತ್ನಲ್ಲಿ ಶೇಕಡ 46 ರಷ್ಟು ಸಂಖ್ಯಾಬಲ ಇರುವ ಆಡಳಿತಾರೂಢ ಸರ್ಕಾರ ಅಧಿಕಾರದಲ್ಲಿ ಉಳಿಯಲು ಸೇನೆಯ ಸೂಚನೆಯಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ಪತನ ಗ್ಯಾರಂಟಿ ಎಂದು ಹೇಳಲಾಗಿದ್ದು, ಇದರಿಂದಾಗಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.