ಪೀರಿಯಡ್ಸ್ ಸಮಯ ಸಮೀಪಿಸುತ್ತಿದ್ದಂತೆ ಮೊಡವೆ ಸಮಸ್ಯೆ ಕಾಡುತ್ತದೆ. ಕಿಬ್ಬೊಟ್ಟೆ ನೋವು, ತಲೆನೋವು, ಸೊಂಟ ನೋವಿನೊಂದಿಗೆ ಮೊಡವೆಯೂ ಮೂಡಿ ಕಿರಿಕಿರಿ ಹುಟ್ಟಿಸುತ್ತದೆ.
ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆ ಅಂದರೆ ಈಸ್ಟ್ರೋಜೆನ್ ಪ್ರಮಾಣ ಹೆಚ್ಚುವುದರಿಂದ ಮೊಡವೆಗಳು ಮೂಡುತ್ತವೆ. ಗಲ್ಲದಲ್ಲಿ ಹುಟ್ಟಿಕೊಳ್ಳುವ ಇವು ಸಾಮಾನ್ಯ ಮೊಡವೆಗಿಂತ ದೊಡ್ಡದಿದ್ದು ಕೆಂಪಾಗಿರುತ್ತವೆ.
ಇದನ್ನು ಚಿವುಟಿದರೆ ಮತ್ತಷ್ಟು ದೊಡ್ಡದಾಗುತ್ತದೆ. ಇದರ ಕಲೆಯೂ ಉಳಿದುಕೊಳ್ಳುತ್ತದೆ. ಮುಟ್ಟದಿದ್ದರೆ ಸ್ವಲ್ಪ ದಿನದಲ್ಲಿ ಮಾಯವಾಗುತ್ತದೆ.
ಒಂದು ಟವಲ್ ಅನ್ನು ಬಿಸಿನೀರಿನಲ್ಲಿ ಅದ್ದಿ, ನೀರನ್ನು ಹಿಂಡಿ ಮೊಡವೆ ಮೇಲೆ 10 ನಿಮಿಷ ಬಳಿಕ ಮತ್ತೆ ಪುನರಾವರ್ತಿಸಿ ಇದರಿಂದ ಮೊಡವೆ ಗಾತ್ರ ಸಣ್ಣದಾಗುತ್ತದೆ.
ಐಸ್ ಕ್ಯೂಬ್ ಅನ್ನು ಟವಲ್ ನಲ್ಲಿ ಹಾಕಿ ಮೊಡವೆ ಮೇಲೆ ಮೆಲ್ಲನೆ ಒತ್ತಿ ಐದು ನಿಮಿಷ ಹಿಡಿಯಿರಿ. ಇದರಿಂದ ಮೊಡವೆ ನೋವು ಕಡಿಮೆಯಾಗಿ ಮೊಡವೆಯೂ ಮಾಯವಾಗುತ್ತದೆ.