alex Certify ಬಿಗ್‌ ನ್ಯೂಸ್:‌ ಆನ್‌ ಲೈನ್‌ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಬ್ರೇಕ್ – 5 ನೇ ತರಗತಿವರೆಗಿನ ಮಕ್ಕಳಿಗಿಲ್ಲ ಟೆನ್ಶನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್:‌ ಆನ್‌ ಲೈನ್‌ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಬ್ರೇಕ್ – 5 ನೇ ತರಗತಿವರೆಗಿನ ಮಕ್ಕಳಿಗಿಲ್ಲ ಟೆನ್ಶನ್

ಕಳೆದ ಹಲವು ದಿನಗಳಿಂದ ಪುಟ್ಟ ಮಕ್ಕಳಿಗೆ ಆನ್‌ ಲೈನ್‌ ಶಿಕ್ಷಣ ನೀಡುವ ಕುರಿತಂತೆ ನಡೆಯುತ್ತಿದ್ದ ಚರ್ಚೆಗೆ ಇಂದು ತೆರೆ ಬಿದ್ದಿದ್ದು, ಎಲ್.ಕೆ.ಜಿ. – ಯುಕೆಜಿ ಸೇರಿದಂತೆ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್‌ ಲೈನ್‌ ಶಿಕ್ಷಣ ನೀಡುವುದಕ್ಕೆ ಬ್ರೇಕ್‌ ಹಾಕಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.‌ ಸುರೇಶ್‌ ಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಪುಟ್ಟ ಮಕ್ಕಳಿಗೆ ಆನ್‌ ಲೈನ್‌ ಶಿಕ್ಷಣ ನೀಡಿದರೆ ಮಾನಸಿಕ ಒತ್ತಡ ಬಿದ್ದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.‌‌ ಅಲ್ಲದೇ ಆನ್‌ ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುವುದಕ್ಕೂ ಕಡಿವಾಣ ಹಾಕಲಾಗಿದೆ.

ಇಂದಿನ ಸಭೆಯಲ್ಲಿ ರಾಜ್ಯದ ಶಿಕ್ಷಣ ತಜ್ಞರು, ವೈದ್ಯರು ಸೇರಿದಂತೆ ಹಲವರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...