ಮೀನು ಎಂದರೆ ನೆನಪಾಗೋದೆ ಕರಾವಳಿ. ಎಷ್ಟೋ ಮಂದಿ ಮೀನಿನ ಖಾದ್ಯ ಸವಿಯಲೆಂದೇ ಕರಾವಳಿ ಭಾಗಗಳಿಗೆ ಹೋಗುವುದನ್ನು ನೋಡಿದ್ದೇವೆ. ಕೆಲ ಮೀನು ಪ್ರಿಯರು ಮೀನಿನ ಊಟವಿಲ್ಲದೆ ಇರೋದೆ ಎಲ್ಲ. ಆ ಮಟ್ಟಿಗೆ ಮೀನು ಎಂದರೆ ಇಷ್ಟ ಅಂತಾರೆ ಅದೆಷ್ಟೋ ಮಂದಿ. ಆದರೆ ಇದೀಗ ಇಂತವರಿಗೊಂದು ಶಾಕಿಂಗ್ ನ್ಯೂಸ್ ಕಾದಿದೆ.
ಹೌದು, ಮೀನಿನ ದರ ಇದೀಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮೀನಿನ ದರ ಮೂರು ಪಟ್ಟು ಹೆಚ್ಚಳವಾಗಿದೆ. ಲಾಕ್ ಡೌನ್ ನಿಂದಾಗಿ ಮೀನಿನ ಉದ್ಯಮ ಸ್ಥಗಿತಗೊಂಡಿದೆ. ಹಾಗಾಗಿ ನೆರೆಯ ಗೋವಾ, ಆಂದ್ರಪ್ರದೇಶದಿಂದ ಮೀನನ್ನು ತರಿಸಲಾಗುತ್ತಿದೆ. ಹೀಗಾಗಿ ಮೀನಿನ ದರ ಏರಿಕೆಯಾಗಿದೆ.
150 ರೂಪಾಯಿಗೆ ಸಿಗುತ್ತಿದ್ದ ಸಣ್ಣಪುಟ್ಟ ಮೀನುಗಳಿಗೆ ಈಗ 500 ಆಗಿದೆ. 250 ರೂಪಾಯಿ ಇದ್ದ ಬಂಗುಡೆ ಮೀನು ಕೆ.ಜಿ.ಗೆ 400 ರೂಪಾಯಿ ಆಗಿದೆ. ಅಂಜಲ್ ಮೀನಿನ ದರ 600 ರಿಂದ 1000 ರೂಪಾಯಿಯಾಗಿದೆ. ಮಾಂಜಿ ಮೀನಿನ ದರ 750 ರಿಂದ 1100 ರೂ.ಗೆ ಏರಿಕೆಯಾಗಿದೆ.