ದೇಶದಲ್ಲಿ ಕೊರೊನಾ ಸೋಂಕು ಹರಡುವುದು ಆರಂಭವಾದ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೊಬೈಲ್ ಗಳಲ್ಲಿ ಕೊರೋನಾ ಕಾಲರ್ ಟ್ಯೂನ್ ಆರಂಭವಾಗಿದೆ. ಇದರಿಂದಾಗಿ ಕರೆ ಮಾಡುವವರು ಕಿರಿಕಿರಿ ಅನುಭವಿಸುವಂತಾಗಿದೆ.
ಕಾಲರ್ ಟ್ಯೂನ್ ತೆಗೆಯುವ ವಿಧಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೀಚರ್ ಫೋನುಗಳಲ್ಲಿ *646*224# ಡಯಲ್ ಮಾಡಿದರೆ ಕಾಲರ್ ಟ್ಯೂನ್ ಸ್ಥಗಿತಗೊಳ್ಳಲಿದೆ. ಏರ್ಟೆಲ್ ಸಿಮ್ ಹೊಂದಿದ ಸ್ಮಾರ್ಟ್ ಫೋನ್ ನಿಂದ *646*224# ಡಯಲ್ ಮಾಡಿ 1 ಒತ್ತಿದ್ದರೆ ಕಾಲರ್ ಟ್ಯೂನ್ ಸ್ಥಗಿತಗೊಳ್ಳಲಿದೆ.
ಅದೇ ರೀತಿ ವೊಡಾಫೋನ್ ಐಡಿಯಾ ಸಿಮ್ ಬಳಕೆದಾರರು ಕಾಲರ್ ಟ್ಯೂನ್ ಕೇಳಿಸುವಾಗ ಸ್ಟಾರ್ ಅಥವಾ 1 ಡಯಲ್ ಮಾಡಿದರೆ ಕಾಲರ್ ಟ್ಯೂನ್ ಸ್ಥಗಿತಗೊಳ್ಳಲಿದೆ. ಜಿಯೋ ಸಿಮ್ ನಲ್ಲಿ ಸ್ಟಾಪ್(STOP) ಎಂದು ಟೈಪ್ ಮಾಡಿ 155223 ಗೆ ಕಳಿಸಿದರೆ ಕಾಲರ್ ಟ್ಯೂನ್ ನಿಲ್ಲುತ್ತದೆ ಎಂದು ಹೇಳಲಾಗಿದೆ.