2 ದಶಲಕ್ಷ ವರ್ಷಗಳ ಹಿಂದೆ ಇದ್ದ ಅಪರೂಪದ ಜಾತಿಯ ಕಪ್ಪೆಯ ಪಳೆಯುಳಿಕೆಯನ್ನು ಅರ್ಜೆಂಟೀನಾದ ಪ್ಯಾಲಿಯಂಟೋಲಜಿಸ್ಟ್ ಗಳು ಪತ್ತೆ ಮಾಡಿದ್ದಾರೆ.
ಬ್ಯೂನಸ್ ಐರಿಸ್ ನಗರದ ಉತ್ತರಕ್ಕೆ 180 ಕಿಲೋಮೀಟರ್ ದೂರದ ಸ್ಯಾನ್ ಪೆಡ್ರೋದಲ್ಲಿ ಬಾವಿ ಅಗೆಯುವಾಗ 144 ಅಡಿ ಆಳದಲ್ಲಿ ಕಪ್ಪೆ ಪಳೆಯುಳಿಕೆ ಪತ್ತೆಯಾಗಿದೆ.
ಇದು ಮರಗಪ್ಪೆಗಳಿಗಿಂತ ವಿಭಿನ್ನವಾಗಿತ್ತು. ಆದರೂ ವಿವಿಧ ಆಯಾಮಗಳಲ್ಲಿ ಇದನ್ನು ಗುರುತಿಸಲಾಯಿತು ಎಂದು ತಜ್ಞರು ಹೇಳಿದ್ದಾರೆ.
ಹವಾಮಾನ ಹಾಗೂ ಪರಿಸರದಲ್ಲಿನ ಬದಲಾವಣೆಗಳ ಸೂಕ್ಷ್ಮ ಗ್ರಹಿಕೆಗಾಗಿ ಸಂಶೋಧಕರು ಕಪ್ಪೆಯನ್ನು ಪರಿಗಣಿಸುವ ವಾಡಿಕೆ ಇದೆ. ಇತಿಹಾಸ ಪೂರ್ವದ ಕಪ್ಪೆಗಳ ಬಗ್ಗೆ ನಮಗೆ ಬಹಳ ಕಡಿಮೆ ತಿಳಿದಿದೆ. ಇದೀಗ ಪಳೆಯುಳಿಕೆ ಸಿಕ್ಕಿರುವುದು ಅಧ್ಯಯನಕ್ಕೆ ಅನುಕೂಲಕರ ಎಂದು ಅಲ್ಲಿನ ನ್ಯಾಚುರಲ್ ಸೈನ್ಸ್ ಮ್ಯೂಸಿಯಂ ಸಂಶೋಧಕರು ಹೇಳಿದ್ದಾರೆ.