ಜನಾಂಗೀಯ ದ್ವೇಷದ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿರುವ ‘Black Lives Matter’ ಪ್ರತಿಭಟನೆಯು ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಫಿಲಡೆಲ್ಫಿಯಾದಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಸಹ ಪ್ರತಿಭಟನೆಯ ಅಖಾಡಕ್ಕೆ ಇಳಿದಿದ್ದಾರೆ.
ಮೈಕೆಲ್ ಗಾರ್ಡನ್ ಹಾಗೂ ಕೆರ್ರಿ-ಆನಿ ಹೆಸರಿನ ಈ ನವದಂಪತಿ ಮದುವೆ ಧಿರಿಸಿನಲ್ಲಿ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸುತ್ತಲೇ ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರು ದೊಡ್ಡ ಮಟ್ಟದಲ್ಲಿ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಪರಸ್ಪರ ಚುಂಬಿಸಿಕೊಳ್ಳುತ್ತಿರುವ ಈ ನವದಂಪತಿಗಳ ಚಿತ್ರವು ಎಲ್ಲೆಡೆ ಸದ್ದು ಮಾಡುತ್ತಿದೆ.