ಮನೆಮನೆಗೆ ಅಗತ್ಯ ಸೇವೆ ತಲುಪಿಸುವ ‘ಜನ ಸೇವಕ’ ಯೋಜನೆಯನ್ನು ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹೀಗಾಗಿ ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಹಾಗೂ ಮತದಾರರ ಪಟ್ಟಿ ಈ ಸೇವೆಗೆ ಸೇರ್ಪಡೆಗೊಳ್ಳಲಿದೆ.
ಇದರಿಂದಾಗಿ ಮನೆ ಬಾಗಿಲಲ್ಲೇ ಆಧಾರ್ ನೋಂದಣಿ ಮಾಡಿಸುವ, ಎಪಿಎಲ್ ಪಡಿತರ ಚೀಟಿ ಪಡೆಯುವ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅಥವಾ ಪರಿಷ್ಕರಣೆಗೆ ಅವಕಾಶ ಸಿಗಲಿದೆ.
‘ಜನ ಸೇವಕ’ ಯೋಜನೆಯಡಿ ಆದಾಯ, ಜಾತಿ ಪ್ರಮಾಣ ಪತ್ರ, ಹಿರಿಯ ನಾಗರಿಕರ ಪಿಂಚಣಿ ಸೇವೆ, ಕಾರ್ಮಿಕ, ಆರೋಗ್ಯ, ಪೊಲೀಸ್ ಸೇವೆ ಸೇರಿದಂತೆ 50 ಸೇವೆಗಳನ್ನು ಈಗಾಗಲೇ ಒದಗಿಸಲಾಗುತ್ತಿದ್ದು, ಹೀಗಾಗಿದ್ದಕ್ಕೆ ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಹಾಗೂ ಮತದಾರರ ಪಟ್ಟಿ ಸೇರ್ಪಡೆಗೊಳ್ಳಲಿದೆ.