ಬೆಂಗಳೂರು: ಮೊಬೈಲ್ ಕಳವು ಮಾಡುತ್ತಿದ್ದ ಆರೋಪದಡಿ ಬಾಲಕನೊಬ್ಬನನ್ನು ವಶಕ್ಕೆ ಪಡೆದ ಪೊಲೀಸರು ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ 26 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 5ರಂದು ವ್ಯಕ್ತಿಯೊಬ್ಬರ ಮೊಬೈಲ್ ಕಳವಾಗಿದ್ದು ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈತ ಹಲವೆಡೆ ಮೊಬೈಲ್ ಕಳವು ಮಾಡಿದ್ದು ಆತನಿಂದ ಮೂರು ಲಕ್ಷ ರೂ. ಮೌಲ್ಯದ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಎಲ್ಬಿಎಸ್ ನಗರ, ತಿಪ್ಪಸಂದ್ರ, ಇಂದಿರಾನಗರ, ಶಿವಾನಂದ ನಗರ, ಜೀವನ್ ಭೀಮಾನಗರ, ಬೈಯಪ್ಪನಹಳ್ಳಿ ಮೊದಲಾದ ಕಡೆ ಬಾಲಕ ಮೊಬೈಲ್ ಕಳವು ಮಾಡಿದ್ದ ಎನ್ನಲಾಗಿದೆ.