![](https://kannadadunia.com/wp-content/uploads/2020/04/corona-agencies.jpg)
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 12 ಜನರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಇದೆ. ಮಹಾರಾಷ್ಟ್ರದಿಂದ ಆಗಮಿಸಿದ 12 ಜನರಿಗೆ ಸೋಂಕು ತಗಲಿರುವ ಸಾಧ್ಯತೆ ಇದೆ.
ಶಿಕಾರಿಪುರ ತಾಲೂಕಿನ ಐವರು ಮತ್ತು ಸೊರಬ ತಾಲೂಕಿನ ಮೂವರು ಹಾಗೂ ಹೊಸನಗರ ತಾಲೂಕಿನ ನಾಲ್ವರು ಸೇರಿದಂತೆ 12 ಜನರನ್ನು ಶಿವಮೊಗ್ಗದ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ವೈದ್ಯಕೀಯ ವರದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.