ಸರೋವರದಲ್ಲೆ ನಿರ್ಮಿತವಾಗಿರುವ ಕೇರಳದ ಏಕೈಕ ದೇವಾಲಯ ಕಾಸರಗೋಡಿನ ಅನಂತಪುರ. ಇದನ್ನು ಅನಂತಪುರ ಸರೋವರ ದೇವಾಲಯ ಎಂದು ಕರೆಯಲಾಗುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ.
ಕಾಸರಗೋಡಿನಿಂದ ಸುಮಾರು 15 ಕಿ.ಮೀ. ಗಳಷ್ಟು ದೂರದಲ್ಲಿರುವ ಈ ದೇವಾಲಯಕ್ಕೆ ಸಾಕಷ್ಟು ಬಸ್ಸುಗಳ ವ್ಯವಸ್ಥೆ ಇದೆ. ಇನ್ನು ಕಾಸರಗೋಡು ರೈಲು ನಿಲ್ದಾಣ ಹೊಂದಿದ್ದು ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
ದೇವಾಲಯಕ್ಕೆ ಭೇಟಿ ನೀಡಲು ಸೇತುವೆ ನಿರ್ಮಿಸಲಾಗಿದ್ದು, ಅದರ ಮೂಲಕ ಸಾಗಿ ದೇಗುಲ ತಲುಪಬಹುದು. ಹೀಗೆ ಹೊರಡುವಾಗ ಬಲಗಡೆಗೆ ಗುಹಾ ರಚನೆಯೊಂದಿರುವುದನ್ನು ಕಾಣಬಹುದು.
ಈ ಸರೋವರದಲ್ಲಿ ಬಾಬಿಯಾ ಹೆಸರಿನ ಮೊಸಳೆಯಿದ್ದು, ಇದು ದೇವಾಲಯದ ಏಕೈಕ ಶಾಖಾಹಾರಿ ಮೊಸಳೆ ಎಂದು ಹೇಳಲಾಗಿದೆ.