ಕೊರೊನಾ ಸಂಕಷ್ಟ ಎಲ್ಲರಿಗೂ ಎದುರಾಗಿರುವುದು ಗೊತ್ತಿರುವ ವಿಚಾರವೇ. ಅನೇಕ ಉದ್ಯಮಗಳು ನೆಲಕಚ್ಚಿ ಹೋಗಿವೆ. ಈ ಉದ್ಯಮಗಳು ಮೇಲೇಳಲು ಸಮಯ ತುಂಬಾ ಬೇಕು. ಇದರಲ್ಲಿ ಓಲಾ, ಊಬರ್, ಟ್ಯಾಕ್ಸಿ ಕೂಡ ಒಂದು.
ಲಾಕ್ ಡೌನ್ 5.0 ನಲ್ಲಿ ಸಾಕಷ್ಟು ವಿನಾಯ್ತಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಓಲಾ, ಉಬರ್, ಟ್ಯಾಕ್ಸಿ ಚಾಲನೆ ಕೂಡ ಒಂದು. ಪ್ರಯಾಣಿಕರು ಹಾಗೂ ಚಾಲಕರ ಹಿತದೃಷ್ಟಿಯಿಂದ ಹೆಚ್ಚಿನ ಗಮನ ಹರಿಸಿ ಉಬರ್ ಪಿಕ್ ಅಪ್ ಝೋನ್ ನಲ್ಲಿ ಸಾನಿಟೈಸರ್ ಹಬ್ ಸ್ಥಾಪಿಸಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಹಭಾಗಿತ್ವದಲ್ಲಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಾನಿಟೈಸರ್ ಹಬ್ ನಿರ್ಮಿಸಲಾಗಿದ್ದು, ಪ್ರತಿ ಟ್ರಿಪ್ ಗೂ ಮುನ್ನ ಉಬರ್ ಟ್ಯಾಕ್ಸಿ ಸಾನಿಟೈಸ್ ಮಾಡಲಾಗುತ್ತಿದೆ. ಇನ್ನು ಡಿಜಿಟಲ್ ಪಾವತಿಗೆ ಮಾತ್ರ ಅವಕಾಶ ಮಾಡಲಾಗಿದೆ. ಇನ್ನು ಕಾರ್ ಚಾಲಕರು ಮಾತ್ರ ಡೋರ್ ಹಾಕಬೇಕು ಹಾಗೂ ತೆಗೆಯಬೇಕು. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಉಬರ್ ಕಂಪನಿ ತಿಳಿಸಿದೆ.