ಜಾರ್ಖಂಡ್ ನ ಒಡಹುಟ್ಟಿದ ಜೋಡಿಯೊಂದು ಜಾಲತಾಣದಲ್ಲಿ ಭರ್ಜರಿ ಡ್ಯಾನ್ಸ್ ಮೂಲಕ ಸೆನ್ಸೇಶನ್ ಸೃಷ್ಟಿಸಿದೆ.
ಇವರ ಅಬ್ಬರ ಎಷ್ಟಿದೆಯೆಂದರೆ ಟಿಕ್ ಟಾಕ್ ನಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಫಾಲೋಯರ್ ಗಳನ್ನು ಹೊಂದಿದ್ದಾರೆ. ಟ್ವಿಟರ್ ನಲ್ಲಿ ಯೂ ಸದ್ದು ಮಾಡುತ್ತಿದ್ದಾರೆ.
ಸನಾತನ ಕುಮಾರ್ ಮಹತೋ ಮತ್ತು ಅವರ ಸಹೋದರಿ ಹಳೆಯ ಹಿಂದಿ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಮಿನಿ ಮಾಥುರ್ ಅವರು ಈ ಜೋಡಿಯ ನೃತ್ಯದ ತುಣುಕೊಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿ ಹೊಗಳಿದ್ದಾರೆ.