alex Certify ಮಗಳಿಗಾಗಿ ಟ್ರಾನ್ಸ್ಪರೆಂಟ್ ಮಾಸ್ಕ್ ಸಿದ್ಧಪಡಿಸಿದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳಿಗಾಗಿ ಟ್ರಾನ್ಸ್ಪರೆಂಟ್ ಮಾಸ್ಕ್ ಸಿದ್ಧಪಡಿಸಿದ ತಾಯಿ

ಕೊರೋನಾ ವೈರಸ್ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಈ ಸಂದರ್ಭದಲ್ಲಿ ತುಟಿಯ ಚಲನೆಯನ್ನು ಗಮನಿಸಿಯೇ ಎದುರಿನವರನ್ನು ಅರ್ಥೈಸಿಕೊಳ್ಳುವ ಮತ್ತು ಪ್ರತಿಕ್ರಿಯಿಸುವ ಶ್ರವಣದೋಷ ಹೊಂದಿದವರು ಏನು ಮಾಡಬೇಕು?

ಶ್ರವಣದೋಷವುಳ್ಳ ತಾಯಿಯು ಅದೇ ಸಮಸ್ಯೆ ಹೊಂದಿದ ತನ್ನ 10 ವರ್ಷದ ಮಗುವಿಗೆ ಹಾಗೂ ಈ ಸಮಸ್ಯೆ ಎದುರಿಸುವ ಇತರರಿಗೆ ನೆರವಾಗಲು ವಿಶೇಷ ಮಾಸ್ಕ್ ವಿನ್ಯಾಸಗೊಳಿಸಿದ್ದಾರೆ.

ಮಾಸ್ಕ್ ನ ಮುಂಭಾಗ ಬಾಯಿ ಬಳಿ ಟ್ರಾನ್ಸ್ಪರೆಂಟ್ ಇರುವಂತೆ ಈ ಮಾಸ್ಕ್ ನ್ನು ವಿನ್ಯಾಸಗೊಳಿಸಲಾಗಿದ್ದು, ಈಗ ಎಲ್ಲರ ಗಮನಸೆಳೆಯುತ್ತಿದೆ.

ಮ್ಯಾಂಚೆಸ್ಟರ್ ನ 42 ವರ್ಷದ ಜಸ್ಟಿನ್ ಬೆಟ್ ತನ್ನ ಮಗಳು ಟಿಯೋನಾ ಶಾಲೆಗೆ ಹೋಗುವಾಗ ಮಾಸ್ಕ್ ಸಮಸ್ಯೆ ಆಗಬಹುದೆಂದು ಆತಂಕಗೊಂಡಿದ್ದಳು. ಕೊನೆಗೆ ಬಹುವಾಗಿ ಯೋಚಿಸಿ ಈ ಸ್ಮಾರ್ಟ್ ಮಾಸ್ಕ್ ವಿನ್ಯಾಸ ರೂಪಿಸಿದ್ದಾರೆ.

ಈ ರೀತಿಯ ಸ್ಮಾರ್ಟ್ ಮಾಹಿತಿ ಹೊರಜಗತ್ತಿಗೆ ತಿಳಿಯುತ್ತಿದ್ದಂತೆ, ಶ್ರವಣದೋಷವುಳ್ಳವರ ಆರೈಕೆ ಕೇಂದ್ರ ಗಳಿಂದಲೇ ಮಾಸ್ಕ್ ಸಿದ್ಧಪಡಿಸುವಂತೆ ಆಕೆ ಆದೇಶ ಪಡೆದುಕೊಂಡರು.

ಪ್ರತಿ ಮಾಸ್ಕ್ ಗೆ 5.99 ಪೌಂಡ್ ನಿಗದಿ ಮಾಡಿದ್ದು, 42 ಪೀಸ್ ಮಾಸ್ಕನ್ನು ಮಾರಾಟ ಮಾಡಿದ್ದಾರೆ.

https://www.facebook.com/justine.d.bate/posts/10158305311098149

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...