alex Certify ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಈ ವಿಡಿಯೋ

ಟ್ರೆಂಟಿನೊ: ನಾವು ಗುಡ್ಡ ಇಳಿದು ಬರುತ್ತಿರುವಾಗ ಕರಡಿ ಹಿಂದಿಂದ ಬಂದು ನಿಂತರೆ. …? ಭಯದಿಂದ ನಡುಕ ಹುಟ್ಟುವುದಿಲ್ಲವೇ. ಇಲ್ಲಾಗಿದ್ದೂ ಅದೇ, 12 ವರ್ಷದ ಬಾಲಕನೊಬ್ಬ ಗುಡ್ಡ ಇಳಿಯುವಾಗ ಕರಡಿಯೊಂದು ಗುಡ್ದದ ತಪ್ಪಲಿನಿಂದ ಆತನ ಹಿಂದಿನಿಂದ ಬಂದು ನಿಂತ ವಿಡಿಯೋ ವೈರಲ್ ಆಗಿದೆ.

ಇಟಲಿಯ ಟ್ರೆಂಟಿನೊದ ಸ್ಪೊರ್ಮಿನೊರ್ ನಗರಸಭೆ ಪ್ರದೇಶದಲ್ಲಿ ನಡೆದ ಘಟನೆ ಇದಾಗಿದ್ದು, ಬಾಲಕನ ತಾಯಿ ಹಾಗೂ ಆಕೆಯ ಸ್ನೇಹಿತ ಅದನ್ನು ವಿಡಿಯೋ ಮಾಡಿದ್ದಾರೆ. ಅವರು ಇಬ್ಬರೂ ಬಾಲಕನಿಗೆ ಧೈರ್ಯ‌ ತುಂಬಿ ನಿಧಾನಕ್ಕೆ ತಮ್ಮ ಬಳಿ ಬಂದು ಸೇರುವಂತೆ ಸೂಚಿಸುತ್ತಾರೆ.

ಬಾಲಕ ಹೆದರುತ್ತಲೇ ನಾಲ್ಕು ಹೆಜ್ಜೆ ನಡೆದು ಹಿಂದೆ ತಿರುಗಿ ನೋಡಿದಾಗ, ಕರಡಿ ಕುರುಚಲು ಗಿಡಗಳ ನಡುವೆ ಎರಡೇ ಕಾಲಿನಲ್ಲಿ ನಿಂತು ಬಾಲಕನನ್ನು ನೋಡುತ್ತಿರುತ್ತದೆ. ವಿಡಿಯೋ ಮೂಲತಃ ಟ್ವಿಟರ್ ನಲ್ಲಿ ಅಪ್ ಲೋಡ್ ಆಗಿದ್ದು, ಈಗ ಇತರ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.

https://www.youtube.com/watch?time_continue=1&v=sooeqpUOjZA&feature=emb_logo

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...