ಆಧುನಿಕ ಜಗತ್ತಿನಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯ ಎನಿಸಿಕೊಂಡಿದೆ. ಅವುಗಳಲ್ಲಿ ಎರಡು ವಿಧ. ಹೈಪೋ ಥೈರಾಯ್ಡ್ ಮತ್ತು ಹೈಪರ್ ಥೈರಾಯ್ಡ್. ಶರೀರದಲ್ಲಿ ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡದೆ ಇರುವಾಗ ಶರೀರದಲ್ಲಿ ಮುಖ್ಯವಾದ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆಹಾರ ಸೇವನೆಯಲ್ಲಿ ವ್ಯತ್ಯಾಸ ಕಾಣದೆ ಬಹಳಷ್ಟು ವೇಗವಾಗಿ ತೂಕ ಹೆಚ್ಚುವುದನ್ನು ಹೈಪೋ ಥೈರಾಯ್ಡ್ ಎನ್ನುತ್ತಾರೆ.
ಹೈಪರ್ ಥೈರಾಯ್ಡಿಸಂ ಎಂದರೆ ಥೈರಾಯ್ಡ್ ಹೆಚ್ಚು ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಥೈರಾಯ್ಡ್ ಇರುವವರು ಅಯೋಡಿನ್ ಯುಕ್ತ ಆಹಾರವನ್ನು ಸೇವಿಸಬೇಕು. ಸ್ಟ್ರಾಬೆರಿ ಹಣ್ಣು ತಿಂದರೆ ತುಂಬಾ ಒಳ್ಳೆಯದು. ನೀವು ಮಾಂಸವನ್ನು ತಿನ್ನುವವರಾದರೆ ಮೊಟ್ಟೆ ಸೇವಿಸಿ. ಮೊಟ್ಟೆಯಲ್ಲಿ ಕ್ಯಾಲ್ಸಿಯಂನೊಂದಿಗೆ ಅಯೋಡಿನ್ ಕೂಡ ಇರುತ್ತದೆ.
ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಕೆಂಪು ಅಕ್ಕಿ ಅನ್ನ, ಬಾರ್ಲಿ ಅಕ್ಕಿ, ಗೋಧಿ ಇವುಗಳಲ್ಲಿ ವಿಟಮಿನ್ ಬಿ ಹೆಚ್ಚಾಗಿ ಇರುತ್ತದೆ. ಈ ಧಾನ್ಯಗಳನ್ನು ತಿನ್ನುವುದರಿಂದ ಕುತ್ತಿಗೆ ದಪ್ಪ ಆಗುವುದನ್ನು ತಡೆಯಬಹುದು. ಅಣಬೆ, ಬೆಳ್ಳುಳ್ಳಿ ಸೊಪ್ಪು, ಮೀನು, ಕೋಸುಗಡ್ಡೆ, ಟೊಮ್ಯಾಟೋ ತಿನ್ನಿ.