ವಿಪರೀತ ಖಾರ ಇರುವ ಆಹಾರವನ್ನು ಸೇವಿಸಿದಾಗ ಅಥವಾ ಮಾಂಸಾಹಾರವನ್ನು ತಿಂದಾಗ ಅದು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯುಬ್ಬರ ಕಾಣಿಸಿಕೊಳ್ಳುತ್ತದೆ.
ಇದನ್ನು ಗ್ಯಾಸ್ಟ್ರಿಕ್ ಎಂದೂ ಕರೆಯುತ್ತೇವೆ. ಮನೆ ಮದ್ದಿನ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಬಹುದು.
ಒಂದು ಲೋಟ ಮೊಸರು, ಕರಿಬೇವು, ಸ್ವಲ್ಪ ಹಸಿ ಶುಂಠಿ, ನಿಂಬೆಹಣ್ಣಿನ ರಸ ಎಲ್ಲವನ್ನು ಮಿಕ್ಸಿ ಜಾರಲ್ಲಿ ಹಾಕಿ ಮಜ್ಜಿಗೆ ತಯಾರಿಸಿ. ಇದಕ್ಕೆ ತುಸು ಉಪ್ಪು ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಗ್ಯಾಸ್ ಸಮಸ್ಯೆ ಕಡಿಮೆ ಆಗುತ್ತದೆ.
ಸೋಂಪು ಕಾಳು ಮತ್ತು ಜೀರಿಗೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ, ಸಣ್ಣದಾಗಿ ಪುಡಿ ಮಾಡಿ. ಹೊಟ್ಟೆ ಉಬ್ಬರ ಬಂದಾಗ ಒಂದು ಲೋಟ ನೀರಿಗೆ ಅರ್ಧ ಚಮಚ ಪುಡಿಯನ್ನು ಮಿಶ್ರಣ ಮಾಡಿ. ಎರಡು ಹೊತ್ತು ಅಂದರೆ ಬೆಳಿಗ್ಗೆ ತಿಂಡಿ ತಿಂದ ಮೇಲೆ ಮತ್ತು ರಾತ್ರಿ ಊಟದ ನಂತರ ಕುಡಿಯಬೇಕು ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.