ದೋಸೆ, ಚಪಾತಿ ಮಾಡಿದಾಗ ರುಚಿಕರವಾದ ಪಲ್ಯವಿದ್ದರೆ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಬೆಂಡೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
3 ಕಪ್ ಬೆಂಡೆಕಾಯಿ ಸಣ್ಣಗೆ ಕತ್ತರಿಸಿಕೊಂಡಿದ್ದು, 2 ಈರುಳ್ಳಿ-ಸಣ್ಣಗೆ ಹಚ್ಚಿಕೊಂಡಿದ್ದು, 1-ಟೊಮೆಟೊ, 5-ಟೇಬಲ್ ಸ್ಪೂನ್ ಎಣ್ಣೆ, 1 ½ ಟೇಬಲ್ ಸ್ಪೂನ್ ಸಾಂಬಾರು ಪುಡಿ, 1 ಟೇಬಲ್ ಸ್ಪೂನ್-ಧನಿಯಾ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವು-5 ಎಸಳು, ಸ್ವಲ್ಪ-ಅರಿಶಿನ, ಸಾಸಿವೆ-ಸ್ವಲ್ಪ. ಇಂಗು-ಚಿಟಿಕೆ, ಜೀರಿಗೆ-ಸ್ವಲ್ಪ, 8 ಎಸಳು-ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಬೆಂಡೆಕಾಯಿ ಸೇರಿಸಿ 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ನಂತರ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಜೀರಿಗೆ, ಇಂಗು, ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಕರಿಬೇವು ಈರುಳ್ಳಿ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಟೊಮೆಟೊ ಸೇರಿಸಿ ಫ್ರೈ ಮಾಡಿಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಸಾಬಾರು ಪುಡಿ, ಅರಿಶಿನ, ಧನಿಯಾ ಪುಡಿ ಸೇರಿಸಿ ಕೈಯಾಡಿಸಿ ಬೆಂಡೆಕಾಯಿ ಸೇರಿಸಿ 3 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಸರ್ವ್ ಮಾಡಿ.