alex Certify ಚಿಕಿತ್ಸೆಗಾಗಿ ಧನ ಸಹಾಯ ಮಾಡುವಂತೆ ಕೋರಿದ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕಿತ್ಸೆಗಾಗಿ ಧನ ಸಹಾಯ ಮಾಡುವಂತೆ ಕೋರಿದ ನಟ

ಮುಂಬೈ: ಸಸುರಾಲ್ ಸಿಮರ್ ಕಾ ಹಿಂದಿ ಧಾರಾವಾಹಿ ನಟ ಆಶಿಶ್ ರಾಯ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬದವರು ಹಾಗೂ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಆದರೆ, ಅವರ ಚಿಕಿತ್ಸೆಗೆ ಹಣವಿಲ್ಲದ್ದರಿಂದ ಧನ ಸಹಾಯಕ್ಕಾಗಿ ಅಭಿಮಾನಿಗಳು ಈಗ ಸಾಮಾಜಿಕ ತಾಲತಾಣದಲ್ಲಿ ಹಣ ಸಂಗ್ರಹಣೆ ಮಾಡುತ್ತಿದ್ದಾರೆ.

54 ವರ್ಷ ವಯಸ್ಸಿನ ಇವರು ಖ್ಯಾತ ಕಿರುತೆರೆ ನಟರಾಗಿದ್ದಾರೆ. ಪ್ರಸ್ತುತ ಮುಂಬೈ ಹಾಸ್ಪಿಟಲ್ ನಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಡಯಾಲಿಸಿಸ್ ಗೆ ಹಣವಿಲ್ಲದ ಕಾರಣ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣ ಮೂಲಕ ಕೋರಿಕೊಳ್ಳಲಾಯಿತು.

ಅಭಿಮಾನಿ ಮತ್ತು ಸ್ನೇಹಿತರು ಇದಕ್ಕೆ ಸ್ಪಂದಿಸಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಪ್ರಮುಖ ಧಾರಾವಾಹಿ ಬ್ಯೋಮಕೇಶ್ ಬಕ್ಷಿ , ಕುಚ್ ರಂಗ್ ಪ್ಯಾರ್ ಕೆ ಯೆಸೇ ಬಿ ಮುಂತಾದವುಗಳಲ್ಲಿ ಅಭಿನಯಿಸಿದ್ದಾರೆ.

https://www.facebook.com/permalink.php?story_fbid=10157588823406298&id=540916297

https://www.facebook.com/permalink.php?story_fbid=10157590272296298&id=540916297

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...