ಸಜ್ಜೆ ಆರೋಗ್ಯಕ್ಕೆ ತುಂಬಾ ಒಳ್ಖೆಯದು. ಇದರಲ್ಲಿ ನಾರಿನಾಂಶ ಹೇರಳವಾಗಿದೆ. ದೇಹದ ತೂಕ ಇಳಿಸಿಕೊಳ್ಳುವವರಿಗೂ ಇದು ಹೇಳಿ ಮಾಡಿಸಿದ್ದು. ಸುಲಭವಾಗಿ ಮಾಡುವ ಸಜ್ಜೆ ರೊಟ್ಟಿ ವಿಧಾನ ಇಲ್ಲಿದೆ.
1 ½ ಕಪ್ ನಷ್ಟು ಸಜ್ಜೆಯನ್ನು ಚೆನ್ನಾಗಿ ತೊಳೆದು ಅದನ್ನು 8 ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಮಿಕ್ಸಿ ಜಾರಿಗೆ 1 ಇಂಚು ಶುಂಠಿ, 2 ಹಸಿಮೆಣಸು ½ ಕಪ್ ಕಾಯಿತುರಿ, ನೆನೆಸಿಟ್ಟುಕೊಂಡ ಸಜ್ಜೆ, ಸ್ವಲ್ಪ ನೀರು ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ನಂತರ ಇದನ್ನು ಒಂದು ಬೌಲ್ ಗೆ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು, 1 ಕಪ್ ಮೆಂತೆ ಸೊಪ್ಪು, ½ ಕಪ್ ಈರುಳ್ಳಿ, ಸ್ವಲ್ಪ ಕೊತ್ತಂಬರಿಸೊಪ್ಪು, ತುರಿದ ಕ್ಯಾರೆಟ್ ¼ ಕಪ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ 3 ಟೇಬಲ್ ಸ್ಪೂನ್ ನಷ್ಟು ಅಕ್ಕಿ ಹಿಟ್ಟು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬಾಳೆಲೆಗೆ ಎಣ್ಣೆ ಸವರಿಕೊಂಡು ಈ ಹಿಟ್ಟಿನಿಂದ ಸ್ವಲ್ಪ ಮಿಶ್ರಣ ತೆಗೆದುಕೊಂಡು ಕೈಯಿಂದ ರೊಟ್ಟಿ ತಟ್ಟಿ ಕಾದ ತವಾದಲ್ಲಿ ಕರಿಯಿರಿ.