ತಟ್ಟೆ ಇಡ್ಲಿ ರುಚಿಯ ಸವಿದವರೆ ಬಲ್ಲ. ರುಚಿಕರವಾದ ತಟ್ಟೆ ಇಡ್ಲಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು. ಅಕ್ಕಿ, ಉದ್ದಿನ ಬೇಳೆಯ ಸರಿಯಾದ ಮಿಶ್ರಣದಿಂದ ತಟ್ಟೆ ಇಡ್ಲಿಯನ್ನು ಸುಲಭವಾಗಿ ತಯಾರಿಸಬಹುದು.
ಇಡ್ಲಿ ಅಕ್ಕಿ-3 ಕಪ್, ಉದ್ದಿನಬೇಳೆ-1 ಕಪ್, ½ ಕಪ್-ಗಟ್ಟಿ ಅವಲಕ್ಕಿ, ¼ ಕಪ್-ಸಬ್ಬಕ್ಕಿ, ಸ್ವಲ್ಪ ಮೆಂತೆ, ಸ್ವಲ್ಪ ಎಣ್ಣೆ, ಚಿಟಿಕೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು.
ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ, ಉದ್ದಿನಬೇಳೆ, ಮೆಂತೆಯನ್ನು ಹಾಕಿ ಚೆನ್ನಾಗಿ ತೊಳೆದು ನೆನೆಸಿಡಿ. ನಂತರ ಇನ್ನೊಂದು ಬೌಲ್ ಗೆ ಸಬ್ಬಕ್ಕಿ, ಅವಲಕ್ಕಿಯನ್ನು ತೊಳೆದುಕೊಂಡು ಅಕ್ಕಿಯ ಬೌಲ್ ಗೆ ಸೇರಿಸಿಕೊಳ್ಳಿ. ನಂತರ 5 ಗಂಟೆಗಳ ಕಾಲ ಇದನ್ನು ಚೆನ್ನಾಗಿ ನೆನೆಸಿಡಿ. ನಂತರ ಇದನ್ನು ಮಿಕ್ಸಿಯಲ್ಲಿ ನಯವಾಗಿ ರುಬ್ಬಿಕೊಳ್ಳಿ.
ರುಬ್ಬಿದ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 8 ಗಂಟೆಗಳ ಕಾಲ ಇದನ್ನು ಮುಚ್ಚಿಡಿ. ಬೆಳಿಗ್ಗೆ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ತಟ್ಟೆ ಇಡ್ಲಿ ಪ್ಲೇಟ್ ಗೆ ಹಾಕಿಕೊಂಡು ಇಡ್ಲಿ ಪಾತ್ರೆಯಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.