ಮನೆಯಲ್ಲಿ ಮಕ್ಕಳು ಇದ್ದರೆ ಏನಾದರೂ ತಿಂಡಿ ಮಾಡಿಟ್ಟುಕೊಂಡರೆ ಒಳ್ಳೆಯದು. ಹಾಗಾಗಿ ಇಲ್ಲಿ ಸುಲಭವಾಗಿ ನಿಪ್ಪಟ್ಟು ಮಾಡುವ ವಿಧಾನವಿದೆ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.
ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ ¼ ಕಪ್ ನಷ್ಟು ಕಡಲೆಬೀಜ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ನಂತರ ಅದೇ ಪ್ಯಾನ್ ಗೆ 5 ಒಣಮೆಣಸು, 15 ಎಸಳು ಕರಿಬೇವು ಹಾಕಿ ಹುರಿದುಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
ನಂತರ ¼ ಕಪ್ ಮೈದಾವನ್ನು ಪ್ಯಾನ್ ಗೆ 2 ನಿಮಿಷಗಳ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ¼ ಕಪ್ ಪುಟಾಣಿ,. ಫ್ರೈ ಮಾಡಿಟ್ಟುಕೊಂಡ ಕರಿಬೇವು, ಒಣಮೆಣಸು, ಕಡಲೆಬೀಜ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ.
ಆ ಬೌಲ್ ಗೆ ಹುರಿದಿಟ್ಟುಕೊಂಡ ಮೈದಾ, ¼ ಕಪ್ ರವಾ ಹಾಕಿ, 1 ಕಪ್ ಅಕ್ಕಿ ಹಿಟ್ಟು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 2 ಟೇಬಲ್ ಸ್ಪೂನ್ ಎಣ್ಣೆ ಬಿಸಿ ಮಾಡಿ ಈ ಮಿಶ್ರಣಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಕೈಯಲ್ಲಿ ತಟ್ಟಿ ನಂತರ ಒಂದು ಎಣ್ಣೆ ಕವರ್ ಮೇಲೆ ಇದನ್ನು ಇಟ್ಟು ಸ್ವಲ್ಪ ತೆಳುವಾಗಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ.