ಕೋವಿಡ್ -19 ಲಾಕ್ ಡೌನ್ ಬಳಿಕ ಶಾಂಘೈನಲ್ಲಿ ಮುಚ್ಚಲ್ಪಟ್ಟಿದ್ದ ಡಿಸ್ನಿ ಲ್ಯಾಂಡ್ ಥೀಮ್ ಮತ್ತೆ ಆರಂಭವಾಗಿದೆ. ಜತೆಗೆ ಅತಿಥಿಗಳನ್ನು ಸ್ವಾಗತಿಸಲು ಮಿಕ್ಕಿ ಮೌಸ್ ಮತ್ತು ಅದರ ಸ್ನೇಹಿತರಾದ ಮಿನ್ನಿ ಮೌಸ್, ಡೈಸಿ ಮತ್ತು ಡೊನಾಲ್ಡ್ ಡಕ್ ಸಜ್ಜಾಗಿ ನಿಂತಿವೆ.
ಚೀನಾದಲ್ಲಿ ಕೊರೋನಾ ಸೋಂಕು ತಗ್ಗುತ್ತಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗೆಯೇ ವಿಶ್ವವಿಖ್ಯಾತ ಡಿಸ್ನಿ ಲ್ಯಾಂಡ್ ಕೂಡ ಸೂಕ್ತ ಮುನ್ನೆಚ್ಚರಿಕೆ ಕ್ರಮದೊಂದಿಗೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ.
ಶೇಕಡ 20ರಷ್ಟು ಜನಸಂದಣಿಯ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ಸಾಮಾಜಿಕ ಅಂತರಕ್ಕೆ ಪ್ರಾಮುಖ್ಯತೆ ಕೊಡಲಾಗುತ್ತಿದೆ.