ಹಲವು ರೀತಿಯ ವೈರಸ್ ಗಳನ್ನು ಬರದಂತೆ ನಾವು ತಡೆಗಟ್ಟಬಹುದು. ಆ ಬಳಿಕ ವೈದ್ಯರನ್ನು ಕಾಣಲು ಓಡುವ ಬದಲು, ಆರಂಭದಲ್ಲೇ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.
ಚಹಾ ನಾವು ಕುಡಿಯಲು ಕಲಿತದ್ದು ಬ್ರಿಟಿಷರು ಬಂದ ಬಳಿಕ. ಅದಕ್ಕೂ ಮೊದಲು ನಾವು ಕುಡಿಯುತ್ತಿದ್ದ ಕೊತ್ತಂಬರಿ, ಜೀರಿಗೆ ಕಷಾಯದಲ್ಲಿ ಸರ್ವ ರೋಗಗಳಿಗೆ ಔಷಧವಿದೆ. ಇದಕ್ಕೆ ಶುಂಠಿ, ಕಾಳುಮೆಣಸು ಸೇರಿಸಿ ಕುಡಿದರೆ ಎಲ್ಲಾ ರೀತಿಯ ವೈರಸ್ ಗಳನ್ನು ದೂರವಿಡಬಹುದು.
ವಾರಕ್ಕೊಮ್ಮೆ ಅಮೃತ ಬಳ್ಳಿ, ಶುಂಠಿ, ಜೀರಿಗೆ ಕಷಾಯ ಕುಡಿದರೆ ಯಾವ ರೋಗವೂ ನಿಮ್ಮ ಬಳಿ ಬರದು. ಕಿರಾತ ಕಡ್ಡಿಯ ಕಷಾಯವೂ ಬಲುಪಯೋಗಿ.
ನೆಲನೆಲ್ಲಿಯ ತಂಬುಳಿ, ತುಳಸಿ ಎಲೆ ಕುದಿಸಿದ ನೀರು, ಹಸಿಬೆಳ್ಳುಳ್ಳಿ ಸೇವನೆ, ಲಾವಂಚ ಬೇರಿನ ನೀರನ್ನು ಕುಡಿಯುವುದರಿಂದ ಹಲವಾರು ರೋಗಗಳನ್ನು ತಡೆಯಬಹುದು.