ಪಾಟ್ನಾ: ರಾನು ಮೊಂಡಲ್ ಎಂಬ ಭಿಕ್ಷುಕಿ ಲತಾ ಮಂಗೇಶ್ಕರ್ ಅವರ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಇದ್ದಕ್ಕಿದ್ದಂತೆ ಸೆಲಿಬ್ರಿಟಿ ಆದ ಕತೆ ಗೊತ್ತೇ ಇದೆ.
ಸುಸ್ಪಷ್ಟ ಇಂಗ್ಲಿಷ್ ಮಾತನಾಡುವ ಪಾಟ್ನಾದ ಸಿಂಗ್ಸ್ ಜಿಮ್ ರೀವ್ಸ್ ಸಮೀಪವಿರುವ ಭಿಕ್ಷುಕನೊಬ್ಬ ಈಗ ನೆಟ್ಟಿಗರ ಗಮನ ಸೆಳೆದಿದ್ದಾನೆ.
ತನ್ನನ್ನ ಸನ್ನಿ ಬಾಬಾ ಎಂದು ಹೇಳಿಕೊಂಡ ಭಿಕ್ಷುಕ ತನಗೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿ ಎಂದು ಹೇಳುತ್ತಾನೆ.
ಇಂಗ್ಲಿಷ್ ನಲ್ಲಿಯೇ ಉತ್ತರಿಸುತ್ತಾನೆ. “ವಾಟ್ಸ್ ಯುವರ್ ಸೀಕ್ರೆಟ್, ಲಿಟ್ಲ್ ಕ್ಲೋಸರ್” ಎಂಬ ಇಂಗ್ಲಿಷ್ ಹಾಡು ಹಾಡುತ್ತಿರುವ ವಿಡಿಯೋ ಸಕತ್ ವೈರಲ್ ಆಗಿದೆ. ಮೂಲತಃ ನಾನೊಬ್ಬ ಹಾಡು ಹಾಗೂ ನೃತ್ಯಗಾರ. ಆದರೆ, ನಾನೀಗ ಭಿಕ್ಷೆ ಬೇಡುತ್ತೇನೆ ಎಂದು ಇಂಗ್ಲಿಷ್ ನಲ್ಲೇ ಉತ್ತರಿಸುತ್ತಾನೆ. ವಿಡಿಯೋವನ್ನು 31 ಸಾವಿರ ಜನ ವೀಕ್ಷಿಸಿದ್ದಾರೆ.