alex Certify ಗುಹಾ ದೇಗುಲಗಳ ಸೊಬಗು ಸವಿಯಲು ಬನ್ನಿ ʼಬಾದಾಮಿʼಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಹಾ ದೇಗುಲಗಳ ಸೊಬಗು ಸವಿಯಲು ಬನ್ನಿ ʼಬಾದಾಮಿʼಗೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಗುಹಾಲಯಗಳನ್ನು ಅಜಂತಾ ಗುಹಾಲಯಗಳಿಗೆ ಹೋಲಿಸಲಾಗುತ್ತದೆ. ವಿಶ್ವವಿಖ್ಯಾತವಾದ ಬಾದಾಮಿ ಗುಹಾ ದೇವಾಲಯವಾಗಿದ್ದು ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇಗುಲಗಳಿವೆ.

ಬಾದಾಮಿ, ಹಿಂದೆ ಚಾಲುಕ್ಯ ರಾಜವಂಶದ ರಾಜಧಾನಿಯಾಗಿತ್ತು. ಇಲ್ಲಿ ಒಟ್ಟು 5 ಗುಹಾಲಯಗಳಿದ್ದು ಅವುಗಳಲ್ಲಿ 2 ಹಿಂದೂ ದೇವತೆಗಳದ್ದು. ಇಲ್ಲಿನ ವಾಸ್ತುಶಿಲ್ಪ, ಶಿಲ್ಪಕಲೆ ನೋಡಿಯೇ ಅನಂದಿಸಬೇಕು. ನೃತ್ಯದ ಭಂಗಿಯಲ್ಲಿರುವ ನಟರಾಜನ ಅದ್ಭುತ ಭಂಗಿ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತದೆ.

ಈ ದೇಗುಲಗಳು ಹುಬ್ಬಳ್ಳಿ-ಧಾರವಾಡದಿಂದ ಸುಮಾರು 110 ಕಿ.ಮೀ. ಹಾಗೂ ಬೆಂಗಳೂರಿನಿಂದ 448 ಕಿ.ಮೀ. ದೂರದಲ್ಲಿದೆ. ಕನ್ನಡದ ಭಾಷೆಯ ಹಲವು ಶಾಸನಗಳು ಇಲ್ಲಿದ್ದು, ಇದು ಮಾನವ ನಿರ್ಮಿತ ಎಂಬುದೇ ಒಂದು ವಿಶೇಷ. ಚಾಲುಕ್ಯರು ನಮಗೆ ನೀಡಿದ ಅದ್ಭುತ ಕೊಡುಗೆಗಳಲ್ಲಿ ಒಂದು. ಇಲ್ಲಿ ಅಕರ್ಷಕ ಪ್ರವೇಶ ದ್ವಾರ, ಸುಂದರವಾದ ಮುಖಮಂಟಪಗಳಿವೆ. ಮುಖ್ಯ ಸಭಾಂಗಣವೂ ಇಲ್ಲಿದೆ. ಇದನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಭಾರತೀಯ ದೇವಸ್ಥಾನದ ನಿರ್ಮಾಣ ಕಲೆಯ ತೊಟ್ಟಿಲೆನಿಸಿದ ಐಹೊಳೆ, ಪಟ್ಟದಕಲ್ಲು, ಮಹಾಕೂಟಗಳು ಇಲ್ಲಿಂದ ಹೆಚ್ಚು ದೂರದಲ್ಲಿಲ್ಲ. ಹಾಗಾಗಿ ಐತಿಹಾಸಿಕ ಈ ಎಲ್ಲಾ ಪ್ರದೇಶಗಳನ್ನು ಜೊತೆಯಾಗಿಯೇ ನೋಡಿ ಬರುವ ಯೋಜನೆ ಹಾಕಿಕೊಂಡು ಪ್ರವಾಸಕ್ಕೆ ಅಣಿಯಾಗಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...