ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರಿಂದ ಸೌಂದರ್ಯವನ್ನೂ ವೃದ್ಧಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?
ಚಹಾದ ಕಷಾಯ ತಯಾರಿಸಿ, ಸಕ್ಕರೆ ಹಾಕದೆ ಮುಖಕ್ಕೆ ಹಚ್ಚಿ, 20 ನಿಮಿಷಗಳ ಬಳಿಕ ಮುಖ ತೊಳೆಯುವುದರಿಂದ ಕಾಂತಿ ಪಡೆದುಕೊಳ್ಳುತ್ತದೆ. ಇದೇ ಕಷಾಯಕ್ಕೆ ಹತ್ತಿ ಮುಳುಗಿಸಿ ಅದನ್ನು ಫ್ರಿಡ್ಜ್ ನಲ್ಲಿಟ್ಟು ತೆಗೆದು ಕಣ್ಣಿನ ಸುತ್ತ ಇರುವ ವರ್ತುಲದ ಮೇಲೆ ಇಟ್ಟರೆ ಅದು ನಿವಾರಣೆಯಾಗುವುದು.
ಕೂದಲು ಸೀಳು ಒಡೆಯುತ್ತಿದ್ದರೆ ತಲೆ ಸ್ನಾನ ಮಾಡಿದ ಬಳಿಕ ಕೊನೆಗೆ ಸಕ್ಕರೆ ಬೆರೆಸದ ಹಸಿರು ಚಹಾವನ್ನು ಒಂದು ತಂಬಿಗೆ ನೀರು ಬೆರೆಸಿ ತಲೆಗೆ ಸುರಿದುಕೊಳ್ಳಿ. ಇದರಿಂದ ಕೂದಲು ಉದುರುವುದು, ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಕಷಾಯಕ್ಕೆ ಗಟ್ಟಿ ಮೊಸರು ಸೇರಿಸಿ ಮಸಾಜ್ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುವುದು. ಇದಕ್ಕೆ ಸಕ್ಕರೆ, ಜೇನುತುಪ್ಪ ಹಾಕಿ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ. ಇದಕ್ಕೆ ಅಕ್ಕಿ ಹಿಟ್ಟು, ಜೇನುತುಪ್ಪ ಬೆರೆಸಿ ಪ್ಯಾಕ್ ತಯಾರಿಸಿ ಹಚ್ಚುವುದುರಿಂದ ಮೊಡವೆ ಕಲೆ, ರಂಧ್ರಗಳು ನಿವಾರಣೆಯಾಗುವುದು ಖಚಿತ.