ದೂರದಿಂದ ಎಸೆದು ಬಾಟಲ್ ನೇರವಾಗಿ ನಿಲ್ಲಿಸುವ ಚಾಲೆಂಜ್ (ಬಾಟಲ್ ಫ್ಲಿಪ್ ಚಾಲೆಂಜ್) ಎಲ್ಲೆಡೆ ಪ್ರಸಿದ್ಧವಾಗಿದೆ.
ಸಣ್ಣ ಮಗುವೊಂದು ಅತಿ ಸರಳವಾಗಿ ಬಾಟಲ್ ನಿಲ್ಲಿಸಿ ಹೆಮ್ಮೆ ಪಡುವ ವಿಡಿಯೋ ಫೇಸ್ ಬುಕ್ ನಲ್ಲಿ 6 ಮಿಲಿಯನ್ ವ್ಯೂ ಪಡೆದು ಪ್ರಸಿದ್ಧವಾಗಿದೆ. ರಿಚೆಲ್ ಮಾರಿ ದಹೇಜಾ ಎಂಬುವವರು ತಮ್ಮ ಮಗಳ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.
ಕಾಲು ಭಾಗದಷ್ಟು ನೀರು ತುಂಬಿದ ಅರ್ಧ ಲೀಟರ್ ಪ್ಲಾಸ್ಟಿಕ್ ಬಾಟಲ್ ನ್ನು ದಹೇಜಾ ತಮ್ಮ ಮಗಳತ್ತ ಎಸೆಯುತ್ತಾರೆ. ಬಾಟಲ್ ಅಡ್ಡ ಬೀಳುತ್ತದೆ. ಅದನ್ನು ಎತ್ತಿಕೊಂಡು ಮಗು ಎಸೆದಾಗ ಬಾಟಲಿ ನೇರವಾಗಿ ನಿಲ್ಲಿಸುತ್ತದೆ. ಅದನ್ನು ನೋಡಿದ ಮಗು ಅಚ್ಚರಿಯಲ್ಲಿ ನೋಡುವ ಮುದ್ದಾದ ದೃಶ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.
“ತಾನು ಎಲ್ಲ ಹಿರಿಯರನ್ನೂ ಸೋಲಿಸಿದೆ ಎಂಬ ಹೆಮ್ಮೆ ಆಕೆಯ ಮುಖದಲ್ಲಿದೆ”ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಬಾಟಲ್ ನಿಲ್ಲಿಸಿದ ನಂತರದ ಆಕೆಯ ನೋಟ ಬೆಲೆ ಕಟ್ಟಲಾಗದ್ದು” ಎಂದು ಮತ್ತೊಬ್ಬರು ಬಣ್ಣಿಸಿದ್ದಾರೆ.
https://www.facebook.com/rachael.baheza/videos/2977800282266442/