1 ಕಪ್- ರಾಗಿ ಹಿಟ್ಟು, ಕಡಲೆಹಿಟ್ಟು-3 ಟೇಬಲ್ ಸ್ಪೂನ್, ಈರುಳ್ಳಿ-1 ಸಣ್ಣಗೆ ಕತ್ತರಿಸಿದ್ದು, ಖಾರದ ಪುಡಿ-1 ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು-1/2 ಕಪ್, ಹಸಿಮೆಣಸು-1 ಕತ್ತರಿಸಿದ್ದು, ಕರಿಬೇವು-2 ಟೀ ಸ್ಪೂನ್- ಸಣ್ಣಗೆ ಕತ್ತರಿಸಿದ್ದು, ¼ ಟೀ ಸ್ಪೂನ್- ಸೋಡಾ, ಜೀರಿಗೆ-1/2 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ರಾಗಿಹಿಟ್ಟು, ಕಡಲೆಹಿಟ್ಟು, ಸೋಡಾ, ಖಾರದಪುಡಿ, ಜೀರಿಗೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ಹಸಿಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಎಣ್ಣೆ ಕರಿಯಲು ಇಟ್ಟು ಕೈಯಿಂದ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ಎಣ್ಣೆ ಬಾಣಲೆಗೆ ಬಿಡಿ. ಎರಡು ಕಡೆ ಚೆನ್ನಾಗಿ ಕರಿಯಿರಿ.