ಮೈದಾ ಹಿಟ್ಟು-4 ಟೇಬಲ್ ಸ್ಪೂನ್, 150 ಗ್ರಾಂ ಸಕ್ಕರೆ, ಏಲಕ್ಕಿ 2, ಹಳದಿ ಬಣ್ಣದ ಫುಡ್ ಕಲರ್-1/4 ಟೀ ಸ್ಪೂನ್, ಲಿಂಬೆ ಹಣ್ಣಿನ ರಸ-4 ಹನಿ, ಅಕ್ಕಿ ಹಿಟ್ಟು-1/2 ಟೇಬಲ್ ಸ್ಪೂನ್, ಕುಕ್ಕಿಂಗ್ ಸೋಡಾ, 1 ಚಿಟಿಕೆ, ಎಣ್ಣೆ –ಕರಿಯಲು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಮೈದಾ ಹಿಟ್ಟು ಹಾಕಿ ಅದಕ್ಕೆ ಫುಡ್ ಕಲರ್, ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಚಿಟಿಕೆ ಉಪ್ಪು, ಕುಕ್ಕಿಂಗ್ ಸೋಡಾ, ಲಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ದಪ್ಪ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಇಡಿ. ನಂತರ ಒಂದು ಬಾಣಲೆಗೆ ಸಕ್ಕರೆ ಹಾಕಿ ½ ಕಪ್ ನೀರು ಹಾಕಿ ಏರಡು ಏಲಕ್ಕಿ, 2 ಹನಿ ಲಿಂಬೆ ರಸ ಸೇರಿಸಿ ಕುದಿಸಿ. ಸಕ್ಕರೆ ಪಾಕ ಕೈಗೆ ಅಂಟುವಂತಿದ್ದರೆ ಸಾಕು. ತುಂಬಾ ಗಟ್ಟಿ ಪಾಕ ಬೇಡ.
ನಂತರ ಎಣ್ಣೆ ಕುದಿಯಲು ಇಡಿ. ನಂತರ ಹಾಲು ಪ್ಯಾಕೆಟ್ ಕವರ್ ನ ತುದಿ ಕತ್ತರಿಸಿಕೊಂಡು ಅದರ ಒಳಗೆ ಹಿಟ್ಟು ತುಂಬಿಸಿ ವೃತ್ತಾಕಾರದಲ್ಲಿ ಜಿಲೇಬಿಯನ್ನು ಎಣ್ಣೆ ಬಾಣಲೆಗೆ ಬಿಡಿ. ಎರಡೂ ಕಡೆ ಚೆನ್ನಾಗಿ ಕರಿದು ಸಕ್ಕರೆ ಪಾಕಕ್ಕೆ ಹಾಕಿ 2 ನಿಮಿಷ ಹಾಗೆಯೇ ಬಿಡಿ. ನಂತರ ತೆಗೆದು ಪ್ಲೇಟ್ ಗೆ ಹಾಕಿ. ರುಚಿಕರವಾದ ಜಿಲೇಬಿ ಸವಿಯಲು ಸಿದ್ಧವಾಗುತ್ತದೆ.