alex Certify ಮಕ್ಕಳಿಗೆ ಮಾಡಿ ಕೊಡಿ ಗಾರ್ಲಿಕ್ ಬ್ರೆಡ್ ಟೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಮಾಡಿ ಕೊಡಿ ಗಾರ್ಲಿಕ್ ಬ್ರೆಡ್ ಟೋಸ್ಟ್

ಮನೆಯಲ್ಲಿ ಮಕ್ಕಳು ಇದ್ದರೆ ಏನಾದರೂ ತಿಂಡಿ ಕೇಳುತ್ತಾ ಇರುತ್ತಾರೆ. ಬ್ರೇಡ್, ಚೀಸ್ ಇದ್ದರೆ ರುಚಿಕರವಾದ ಗಾರ್ಲಿಕ್ ಬ್ರೇಡ್ ಟೋಸ್ಟ್ ಮಾಡಿ ಕೊಡಿ. ಚೀಸ್ ಹಾಕಿ ಇದನ್ನು ಮಾಡಿಕೊಡುವುದರಿಂದ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಬೇಕಾಗುವ ಸಾಮಗ್ರಿಗಳು:

4 ಬ್ರೆಡ್-ಪೀಸ್, 8-10 ಬೆಳ್ಳುಳ್ಳಿ, ಚೀಸ್ ಕ್ಯೂಬ್ಸ್-2, ಬೆಣ್ಣೆ-50 ಗ್ರಾಂ, ಕೊತ್ತಂಬರಿ ಸೊಪ್ಪು-1 ಟೇಬಲ್ ಸ್ಪೂನ್-2 ಹಸಿಮೆಣಸು ಕತ್ತರಿಸಿದ್ದು.

ಮಾಡುವ ವಿಧಾನ:

ಮೊದಲಿಗೆ ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಕರಗಿಸಿಕೊಳ್ಳಿ. ನಂತರ ಇದಕ್ಕೆ ಜಜ್ಜಿಕೊಂಡ ಬೆಳ್ಳುಳ್ಳಿ ಹಾಕಿ ಗ್ಯಾಸ್ ಆಫ್ ಮಾಡಿ.

ನಂತರ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ 1 ಟೀ ಸ್ಪೂನ್ ಬೆಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಬ್ರೆಡ್ ಅನ್ನು ಫ್ರೈ ಮಾಡಿಕೊಂಡು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ.

ನಂತರ ಬ್ರೆಡ್ ತೆಗೆದುಕೊಂಡು ಅದರ ಮೇಲೆ ಕರಗಿಸಿಕೊಂಡ ಬೆಣ್ಣೆಯನ್ನು ಹಾಕಿ. ನಂತರ ಅದರ ಮೇಲೆ ಕತ್ತರಿಸಿಕೊಂಡ ಹಸಿಮೆಣಸು, ಹಾಕಿ ನಂತರ ತುರಿದ ಚೀಸ್ ಕೊತ್ತಂಬರಿ ಸೊಪ್ಪು ಹಾಕಿ. ನಂತರ ತವಾದ ಮೇಲೆ ಇಟ್ಟು ಬಿಸಿ ಮಾಡಿದರೆ ಗಾರ್ಲಿಕ್ ಬ್ರೆಡ್ ಟೋಸ್ಟ್ ಸವಿಯಲು ಸಿದ್ಧ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...