ಕೆಲವರಿಗೆ ಏನಾದರೂ ವಿಭಿನ್ನವಾದ ಸಿಹಿ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ವಿಭಿನ್ನ ರುಚಿ ಪಾಯಸ ಮಾಡಲು ಬಯಸುತ್ತಿದ್ದರೆ ಇದನ್ನು ಟ್ರೈ ಮಾಡಿ.
ಪ್ರತಿ ಬಾರಿ ಒಂದೇ ರೀತಿ ಪಾಯಸ ತಿಂದು ಬೇಜಾರಾದವರು ಒಮ್ಮೆ ಈ ಸೇಬು ಹಣ್ಣಿನ ಪಾಯಸ ಮಾಡಿಕೊಂಡು ಸವಿಯಿರಿ. ನಿಮ್ಮ ನಾಲಿಗೆಗೆ ರುಚಿ ನೀಡುವುದಲ್ಲದೇ, ಮಾಡುವುದಕ್ಕೂ ಸುಲಭವಾಗಿರುತ್ತದೆ.
1 ಸೇಬು ಹಣ್ಣು, 1 ಟೀ ಸ್ಪೂನ್- ತುಪ್ಪ, 3 ಕಪ್ –ಹಾಲು, ¼ ಕೇಸರಿ ದಳ, ¼ ಕಪ್ ಕಂಡೆನ್ಸಡ್ ಮಿಲ್ಕ್, ¼ ಟೀ ಸ್ಪೂನ್-ಏಲಕ್ಕಿ, 2 ಟೇಬಲ್ ಸ್ಪೂನ್ ಡ್ರೈ ಫ್ರೂಟ್ಸ್.
ಮಾಡುವ ವಿಧಾನ: ಮೊದಲಿಗೆ ಸೇಬು ಹಣ್ಣನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದು ತುರಿದುಕೊಳ್ಳಿ. ತುರಿದ ಸೇಬು ಹಣ್ಣನ್ನು ಒಂದು ಪ್ಯಾನ್ ಗೆ ಹಾಕಿ 1 ನಿಮಿಷ ಹುರಿದುಕೊಳ್ಳಿ. ಇದಕ್ಕೆ 1 ಟೀ ಸ್ಪೂನ್ ತುಪ್ಪ ಹಾಕಿ ಮಿಶ್ರಣ ಮಾಡಿಕೊಳ್ಳಿ. ಸೇಬು ಹಣ್ಣು ಚೆನ್ನಾಗಿ ಬೇಯುವವರೆಗೆ ಬೇಯಿಸಿಕೊಳ್ಳಿ. ನಂತರ ತಣ್ಣಗಾಗಲು ಬಿಟ್ಟು ಬಿಡಿ.
ನಂತರ ಒಂದು ಪಾತ್ರೆಗೆ 3 ಕಪ್ ಹಾಲು ಹಾಕಿ ಕೇಸರಿ ದಳಗಳನ್ನು ಸೇರಿಸಿ ಕುದಿಯಲು ಬಿಡಿ. ಇದಕ್ಕೆ ಕಂಡೆನ್ಸಡ್ ಮಿಲ್ಕ್ ಸೇರಿಸಿ ಮಿಶ್ರಣ ಮಾಡಿ. 10 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಏಲಕ್ಕಿ ಪುಡಿ ಸೇರಿಸಿ. ಹಾಲು ತಣ್ಣಗಾಗಲು ಬಿಟ್ಟು ಬಿಡಿ. ಇದಕ್ಕೆ ಬೇಯಿಸಿ ತಣ್ಣಗಾದ ಸೇಬು ಹಣ್ಣಿನ ಮಿಶ್ರಣ ಸೇರಿಸಿ. 30 ನಿಮಿಷ ಇದನ್ನು ಫ್ರಿಡ್ಜ್ ನಲ್ಲಿಡಿ. ನಂತರ ಇದಕ್ಕೆ ಡ್ರೈ ಫ್ರೂಟ್ಸ್ ಸೇರಿಸಿ ಸರ್ವ್ ಮಾಡಿ.