ಕೊರೊನಾ ವೈರಸ್ ಇಡೀ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಗಡ್ಡದಾರಿಗಳಿಗೆ ವೈರಸ್ ಹೆಚ್ಚು ಡೇಂಜರಸ್.
ಕರೋನಾ ವೈರಸ್ ತಡೆಗಟ್ಟಲು ಹೆಚ್ಚು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹೊರಗೆ ಬರುವಾಗ ಮಾಸ್ಕ್ ಧರಿಸಬೇಕು. ಯಾವುದೇ ವಸ್ತು ಮುಟ್ಟಿದ್ರೂ ಕೈ ತೊಳೆಯಬೇಕು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಗಡ್ಡ ಬಿಡುವ ಪ್ರವೃತ್ತಿ ಇದೆ. ಈ ಗಡ್ಡ ಸೋಂಕು ತಗಲಲು ಕಾರಣವಾಗುತ್ತದೆ.
ಮಾಸ್ಕ್ ಧರಿಸುವ ವೇಳೆ ಗಡ್ಡ ಅಡ್ಡಿ ಮಾಡುತ್ತದೆ. ಗಡ್ಡದಿಂದಾಗಿ ವ್ಯಕ್ತಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಗಡ್ಡದ ಜೊತೆ ಮೀಸೆ ಬಿಡುವವರ ಮುಖಕ್ಕೂ ಮಾಸ್ಕ್ ಫಿಟ್ ಆಗುವುದಿಲ್ಲ.
ಜೊತೆಗೆ ಉಗುರುಗಳು ಎಷ್ಟು ಅಪಾಯಕಾರಿ ಎಂಬುದನ್ನು ತಿಳಿದುಕೊಳ್ಳಿ, ಉಗುರು ಕಚ್ಚುವವರಿಗೆ ವೈರಸ್ ಬೇಗ ತಗಲುತ್ತದೆ.