ಮಾಂಸಹಾರಿಗಳೇನೋ ಚಿಕನ್ ಕಬಾಬ್ ತಿನ್ನುತ್ತಾರೆ. ಆದರೆ, ಸಸ್ಯಹಾರಿಗಳೂ ಅದೇ ಟೇಸ್ಟ್ ನಲ್ಲಿ ಕಬಾಬ್ ರುಚಿ ನೋಡಬಹುದು. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಆಲೂಗಡ್ಡೆಯಲ್ಲಿ ತಯಾರಿಸಿದ ಕಬಾಬ್ ನಿಮಗೆ ಇಷ್ಟವಾಗದಿದ್ದರೆ ಕೇಳಿ,
ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ-ಅರ್ಧ ಕೆಜಿ, ಬ್ರೆಡ್ ಸ್ಲೈಸ್-14, ಹಸಿ ಮೆಣಸಿನಕಾಯಿ-3 ಚಮಚ, ಕೊತ್ತಂಬರಿ ಮತ್ತು ಪುದಿನ ಸೊಪ್ಪು-4 ಚಮಚ, ಗರಂ ಮಸಾಲೆ ಪುಡಿ-1 ಚಮಚ, ದನಿಯಾ ಪುಡಿ-2 ಚಮಚ, ಅರಿಶಿನ ಪುಡಿ-ಅರ್ಧ ಚಮಚ, ಅಕ್ಕಿಹಿಟ್ಟು-6 ಚಮಚ, ಒಣ ಮಾವಿನಕಾಯಿ ಪುಡಿ-1 ಚಮಚ, ಉಪ್ಪು- ರುಚಿಗೆ ತಕ್ಕಂತೆ, ಹಾಗೂ ಕರಿಯಲು ಎಣ್ಣೆಯನ್ನು ಸಿದ್ಧಮಾಡಿ ಇಟ್ಟುಕೊಳ್ಳಿರಿ,
ತಯಾರಿಸುವ ವಿಧಾನ: ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿರಿ, ನೀರು ಸುರಿದು ಒಲೆಯ ಮೇಲೆ ಇಟ್ಟು ಬೇಯಿಸಿಕೊಳ್ಳಿ, ಬೆಂದ ನಂತರ ಇಳಿಸಿ ಸಿಪ್ಪೆಯನ್ನು ತೆಗೆಯಿರಿ, ಕೈಯಿಂದ ಹಿಸುಕಿ ಪುಡಿ ಮಾಡಿಕೊಳ್ಳಿ, ಬ್ರೆಡ್ ಅನ್ನು ನೀರಿನಲ್ಲಿ ಅದ್ದಿ ನೀರನ್ನು ಹಿಂಡಿರಿ, ಬಳಿಕ ಪುಡಿ ಮಾಡಿದ ಆಲೂಗಡ್ಡೆಯ ಪಾತ್ರೆಯಲ್ಲಿ ಹಾಕಿರಿ, ಅದಕ್ಕೆ ಗರಂ ಮಸಾಲೆ ಪುಡಿ, ದನಿಯಾ ಪುಡಿ, ಉಪ್ಪು, ಅಕ್ಕಿಹಿಟ್ಟು, ಮಾವಿನ ಕಾಯಿ ಪುಡಿ, ಅರಿಶಿಣ, ಸಣ್ಣಗೆ ಹೆಚ್ಚಿರುವ ಕೊತ್ತಂಬರಿ, ಪುದಿನ ಸೊಪ್ಪು, ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಕಲಸಿ ನಾದಿಕೊಳ್ಳಿರಿ. ಬಳಿಕ ಅದನ್ನು ಕಬಾಬ್ ಆಕಾರಕ್ಕೆ ಉಂಡೆ ಮಾಡಿ, ಒಂದು ಬಾಣಲಿಯಲ್ಲಿ ಎಣ್ಣೆಯನ್ನು ಇಟ್ಟು ಕಾದ ನಂತರ ಕಬಾಬ್ ಗಳನ್ನು ಕೆಂಪಗೆ ಕರಿಯಿರಿ. ಬಿಸಿಯಾಗಿರುವಾಗಲೇ ಸಾಸ್ ಅಥವಾ ಚಟ್ನಿಯೊಂದಿಗೆ ತಿನ್ನಿರಿ.