ಬುಧವಾರದ ಅಧಿಪತಿ ಬುಧ ಗ್ರಹವಾಗಿರುತ್ತದೆ. ಸೂರ್ಯನಿಗೆ ಅತ್ಯಂತ ಸಮೀಪ ಹಾಗೂ ಸೌರಮಂಡಲದಲ್ಲಿ ಅತೀ ಸಣ್ಣದಾದ ಗ್ರಹ ಇದಾಗಿರುತ್ತದೆ. ಬುಧವಾರ ಹುಟ್ಟಿದವರು ಸದಾ ಏನಾದರೂಂದು ಕೆಲಸ ಮಾಡುತ್ತಲೇ ಇರುತ್ತಾರೆ. ಯಾವುದನ್ನು ಸುಲಭವಾಗಿ ಒಪ್ಪಿಕೊಳ್ಳದೇ ಪ್ರಶ್ನಿಸುವ ಮನೋಭಾವ ಇವರದ್ದು.
ಇನ್ನು ಬುಧವಾರ ಹುಟ್ಟಿದವರಿಗೆ ದೂರದೂರಿಗೆ ಪ್ರಯಾಣ ಮಾಡುವುದೆಂದರೆ ತುಂಬಾ ಖುಷಿ ನೀಡುವ ಸಂಗತಿಯಾಗಿರುತ್ತದೆ. ಹೊಸ ಹೊಸ ಸ್ಥಳಗಳನ್ನು ನೋಡುವುದು ಇವರಿಗೆ ತುಂಬಾ ಇಷ್ಟ. ಹಾಗೇ ಸವಾಲುಗಳನ್ನು ಕೂಡ ಎದುರಿಸಿ ನಡೆಯುವ ಮನೋಭಾವದವರು ಇವರು.
ಮಾತನಾಡುವುದರಲ್ಲಿ ಇವರು ಎತ್ತಿದ ಕೈ. ಯಾರನ್ನು ಬೇಕಾದರೂ ತಮ್ಮ ಮಾತಿನ ಮೋಡಿಗೆ ಒಳಪಡಿಸುವ ಗುಣ ಇವರಲ್ಲಿದೆ. ಹಾಗೇ ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲೂ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಇವರಿಗೆ ಚೆನ್ನಾಗಿ ತಿಳಿದಿದೆ. ತಮ್ಮಿಂದ ಏನಾದರೂ ತಪ್ಪಾದರೆ ಕ್ಷಮೆ ಕೇಳುವ ಹಾಗೂ ಇನ್ನೊಬ್ಬರನ್ನು ಕ್ಷಮಿಸುವ ಗುಣ ಇವರದ್ದು.
ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಮನೋಭಾವದವರು. ತಮ್ಮನ್ನು ನಂಬಿದವರಿಗೆ ಮೋಸ ಮಾಡುವ ಗುಣ ಇವರಲ್ಲಿ ಇಲ್ಲ. ಸ್ನೇಹಿತರನ್ನು ಎಂದೂ ಬಿಟ್ಟುಕೊಡುವವರಲ್ಲ.
ಸಾಹಸ ಪ್ರವೃತ್ತಿ ಹಾಗೂ ಹಾಸ್ಯ ಮನೋಭಾವದರವರು. ಜೀವನವನ್ನು ಖುಷಿಯಿಂದ ಅನುಭವಿಸುವವರು. ಸ್ವಲ್ಪ ಸೂಕ್ಷ್ಮ ಮನಸ್ಥಿತಿಯವರು ಆದರೆ ಆತ್ಮವಿಶ್ವಾಸ ಇವರಲ್ಲಿ ಹೆಚ್ಚಿದೆ.