
ಮೊಡವೆ ಬಂತೆಂದರೆ ಸಾಕು ಚಿಂತೆ ಕಾಡಲು ಶುರುವಾಗುತ್ತೆ. ನಾವು ತಿನ್ನುವ ಆಹಾರ, ಸರಿಯಾಗಿ ನಿದ್ರೆ ಇಲ್ಲದಿರುವಿಕೆ, ಕಲುಷಿತ ವಾತಾವರಣ, ಅತೀಯಾದ ರಾಸಯಾನಿಕ ಸೌಂದರ್ಯಗಳ ಬಳಕೆಯಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ.
ಇನ್ನು ಕೆಲವರಿಗೆ ಹಾರ್ಮೋನುಗಳ ವ್ಯತ್ಯಾಸದಿಂದ ಕೂಡ ಈ ಸಮಸ್ಯೆ ಕಾಡುತ್ತದೆ. ಸುಲಭವಾಗಿ ಮುಖದಲ್ಲಿನ ಮೊಡವೆ ಹಾಗೂ ಕಲೆಯನ್ನು ನಿವಾರಿಸುವುದಕ್ಕೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್.
ತುಳಸಿ ಎಲೆ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಮೊಡವೆಯನ್ನು ಬೇಗನೆ ನಿವಾರಿಸುತ್ತದೆ. ಒಂದು ಹಿಡಿ ತುಳಸಿ ಎಲೆಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಇದನ್ನು ತಣ್ಣಗಾಗಿಸಿ ಒಂದು ಬಾಟಲಿಗೆ ತುಂಬಿಸಿಕೊಂಡು ಫ್ರಿಡ್ಜ್ ನಲ್ಲಿಟ್ಟು ಬಿಡಿ. ಒಂದು ಹತ್ತಿಯ ಉಂಡೆಯ ಸಹಾಯದಿಂದ ಈ ನೀರನ್ನು ನಿಮ್ಮ ಮುಖಕ್ಕೆ ದಿನಕ್ಕೆರಡು ಬಾರಿ ಹಚ್ಚಿಕೊಳ್ಳಿ. ಇದರಿಂದ ಬ್ಯಾಕ್ಟೀರಿಯಾಗಳು ಸಾಯುತ್ತದೆ. ಮುಖದಲ್ಲಿನ ಕಲ್ಮಶಗಳು ದೂರವಾಗುತ್ತದೆ.
ಬೇವಿನ ಎಲೆ ಕೂಡ ಮುಖದ ಮೊಡವೆಗೆ ಉತ್ತಮವಾದ ಮದ್ದಾಗಿದೆ. ಬೇವಿನ ಎಲೆಯನ್ನು ತಂದು ನೆರಳಲ್ಲಿ ಒಣಗಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಇದನ್ನು ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಿ. ಸ್ವಲ್ಪ ರೋಸ್ ವಾಟರ್ ಸೇರಿಸಿ ಮಿಶ್ರಣ ಮಾಡಿಕೊಂಡು ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಮುಖ ತೊಳೆಯಿರಿ.