ಡ್ರೈ ಫ್ರೂಟ್ಸ್ ನಿಂದ ಮಾಡಿದ ಲಡ್ಡುಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಮಕ್ಕಳಿಗೆ ಇದು ಶಕ್ತಿಯನ್ನು ನೀಡುತ್ತದೆ. ಸಂಜೆಯ ಸ್ನಾಕ್ಸ್ ಗೆ ಇದನ್ನು ನೀಡಬಹುದು. ಮಾಡುವುದಕ್ಕೆ ತುಂಬಾ ಸುಲಭ ಹಾಗೂ ಕಡಿಮೆ ಸಮಯ ತೆಗೆದುಕೊಳ್ಳುತ್ತೆ.
ಬೇಕಾಗುವ ಸಾಮಾಗ್ರಿಗಳು: 20 ಖರ್ಜೂರ ಬೀಜ ತೆಗೆದದ್ದು, ಬಾದಾಮಿ, ಗೋಡಂಬಿ, ವಾಲ್ ನಟ್ಸ್, ಪಿಸ್ತಾ, ಕಡಲೇಬೀಜ ಎಲ್ಲಾ ಒಟ್ಟು ಸೇರಿ ¼ ಕಪ್.
ಮಾಡುವ ವಿಧಾನ: ಮೊದಲಿಗೆ ಒಂದು ಪ್ಯಾನ್ ಗೆ ಬಾದಾಮಿ, ಗೋಡಂಬಿ, ವಾಲ್ ನಟ್ಸ್, ಪಿಸ್ತಾ, ಕಡಲೇಬೀಜ ಇವಿಷ್ಟನ್ನು ಹಾಕಿ ಹುರಿದುಕೊಳ್ಳಿ. ನಂತರ ಇದೇ ಪ್ಯಾನ್ ಗೆ ಖರ್ಜೂರವನ್ನು ಹಾಕಿಕೊಂಡು ಹುರಿಯಿರಿ. ಇದು ಮೆದುವಾಗುವವರೆಗೆ ಹುರಿಯಿರಿ.
ನಂತರ ಒಂದು ಮಿಕ್ಸಿ ಜಾರಿಗೆ ಗೋಡಂಬಿ, ಬಾದಾಮಿ, ವಾಲ್ ನೆಟ್ಸ್, ಪಿಸ್ತಾ, ಕಡಲೆಬೀಜವನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಖರ್ಜೂರವನ್ನು ಸೇರಿಸಿ ಒಂದು ಸುತ್ತು ತಿರುಗಿಸಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ತೆಗೆದುಕೊಂಡು ಸಣ್ಣ ಸಣ್ಣ ಉಂಡೆ ಕಟ್ಟಿದರೆ ರುಚಿಕರವಾದ ಡ್ರೈಫ್ರೂಟ್ಸ್ ಲಡ್ಡು ರೆಡಿ.