ಸಾವಿನಿಂದ ಯಾವೊಬ್ಬ ವ್ಯಕ್ತಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನನದ ಹಿಂದೆ ಮರಣ ಇದ್ದೇ ಇದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಮರಣದ ನಂತ್ರ ಆತ್ಮ ಪುನರ್ಜನ್ಮ ಪಡೆಯುತ್ತೆ. ಹಾಗೆ ಶವಯಾತ್ರೆ ನೋಡಿದ್ರೆ ಅನೇಕ ಶುಭ ಫಲಗಳು ಪ್ರಾಪ್ತಿಯಾಗಲಿವೆ.
ನೀವು ಯಾವುದೋ ಕಾರಣಕ್ಕೆ ಹೊರಗೆ ಹೊರಟಾಗ ಅಚಾನಕ್ಕಾಗಿ ಶವ ಯಾತ್ರೆ ನೋಡಿದರೆ ಮನಸ್ಸಿನ ಆಸೆ ಈಡೇರುತ್ತದೆ.
ಸಾಮಾನ್ಯವಾಗಿ ಶವಯಾತ್ರೆ ನೋಡಿದ ವ್ಯಕ್ತಿ ಶವಕ್ಕೆ ಕೈ ಮುಗಿಯುತ್ತಾನೆ. ಶಿವಶಿವ ಎಂದು ಶಿವ ನಾಮ ಜಪಿಸ್ತಾನೆ. ಇದಕ್ಕೆ ಬಲವಾದ ಕಾರಣವಿದೆ. ಸಾವನ್ನಪ್ಪಿದ ವ್ಯಕ್ತಿ ತನ್ನ ಜೊತೆ ತನ್ನ ಶವಕ್ಕೆ ನಮಸ್ಕರಿಸಿದ ವ್ಯಕ್ತಿಯ ನೋವು, ದುಃಖವನ್ನೆಲ್ಲ ಕೊಂಡೊಯ್ಯುತ್ತಾನಂತೆ. ಶವಯಾತ್ರೆ ನೋಡಿದ ವೇಳೆ ಸ್ವಲ್ಪ ಹೊತ್ತು ಅಲ್ಲಿಯೇ ನಿಂತು, ಶಿವನ ಧ್ಯಾನ ಮಾಡಿದ್ರೆ ಸಾವನ್ನಪ್ಪಿದ ವ್ಯಕ್ತಿಯ ಆತ್ಮಕ್ಕೆ ಮುಕ್ತಿ ಸಿಗಲಿದೆಯಂತೆ.
ಜ್ಯೋತಿಷ್ಯಶಾಸ್ತ್ರದಲ್ಲಿಯೂ ಶವಯಾತ್ರೆ ನೋಡುವುದು ಶುಭ ಎಂದು ಹೇಳಲಾಗುತ್ತದೆ. ಶವಯಾತ್ರೆ ನೋಡಿದ್ರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಲಿದೆ. ದುಃಖ ದೂರವಾಗುವುದಲ್ಲದೆ, ಮನಸ್ಸಿನ ಆಸೆ ಪೂರೈಸುತ್ತದೆಯೆಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.